( ಸಾಯಿನಾಥ ದರ್ಗಾ )
ಕೋಲಾರ. ಇಲ್ಲಿನ ಪೋಲೀಸರು ನಗರದಾದ್ಯಂತ ಅಕ್ರಮ ಗಾಂಜಾ ˌ ಹಾಗೂ ಮಾಧಕ ವಸ್ತುಗಳ ದಾಸ್ತಾನು ಅಡ್ಡೆಗಳ ಮೇಲೆ ರೈಡ್ ನಡೆಸುವ ಮೂಲಕ ಅಕ್ರಮಗಳ ಮಾರಾಟಗಾರರಿಗೆ ಶಾಕ್ ನೀಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಎಂ ನಾರಾಯಣ್ ರವರ ಆದೇಶದಂತೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಕಿರಿಯ ಅಧಿಕಾರಿಗಳೂ ಜೊತೆಗೆ ಮೀಸಲುಪಡೆಸೇರಿದಂತೆ ಸುಮಾರು ಐವತ್ತು ಮಂದಿ ಪೋಲೀಸರ ಐದು ಟೀಂಗಳು ಅಂತರಗಂಗೆ ಬೆಟ್ಟದ ತಪ್ಪಲು ಸೇರಿದಂತೆ ಕ್ಲಾಕ್ ಟವರ್ ˌ ಕೀಲು ಕೋಟೆ ˌ ರಹಮತ್ ನಗರ ಮುಂತಾದ ಕಡೆಗಳಲ್ಲಿನ ದಾಸ್ತಾನು ಅಡ್ಡೆಗಳ ಮೇಲೆ ಧಿಡೀರ್ ಧಾಳಿ ನಡೆಸಿದೆ.
ಈಗಾಗಲೇ ಒಂದಷ್ಟು ಮಂದಿ ಗಾಂಜಾ ಮಾರಾಟಗಾರರನ್ನ ತಂದು ವಿಚಾರಣೆ ಗೊಳಪಡಿಸುತ್ತಿರುವ ಪೋಲೀಸರು ತಮ್ಮ ಭೇಟೆಯನ್ನು ಮತ್ತೂ ಮುಂದುವರೆಸಲಿದ್ದಾರೆನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ರಕ್ಷಣಾಧಿಕಾರಿ ನಾರಾಯಣ್ ನಗರ ಪ್ರದೇಶದಲ್ಲಿ ಪೋಲೀಸರ ಕಣ್ಣು ತಪ್ಪಿಸಿ ಅಕ್ರಮಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಈ ದಿನ ಏಕಾ ಏಕಿ ಈ ಧಾಳಿ ನಡೆಸಿದ್ದೇವೆ. ಒಂದಷ್ಟು ಮಂದಿಯ ವಿರುದ್ಧ ಕೇಸನ್ನೂ ದಾಖಲಿಸಿದ್ದೇವಲ್ಲದೇ ಇನ್ನೊಂದಷ್ಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದೇವೆ.
ಅಲ್ಲದೇ ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ತಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದು ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮತೆಗೆದುಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಒಟ್ಟಾರೆˌ ರಕ್ಷಣಾಧಿಕಾರಿಗಳವರ ಈ ನಿಗೂಡ ನಡೆಯಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಒಂದಷ್ಟು ಮಂದಿಗೆ ತಲೆ ಬಿಸಿಯಾಗಿದ್ದು ಗಾಂಜಾ ಪೆಡ್ಲರ್ ಗಳು ಹಾಗೂ ಜೂಜು ಅಡ್ಡೆಗಳಲ್ಲಿ ಪಾಲ್ಗೊಳ್ಳುವ ಮಂದಿ ಈಗಾಗಲೇ ತಮ್ಮ ಅಡ್ಡೆಗಳಿಂದ ಕಾಲ್ಕಿತ್ತಿದ್ದಾರೆನ್ನಲಾಗಿದೆ.