ಸಣ್ಣ ಪತ್ರಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಯವೂ..!

ಹಿಂದುಳಿದ ವರ್ಗಗಳ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತು ಯೋಜನೆ ಮುಂದುವರೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು..!

ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಕರ್ನಾಟಕ ಒಬಿಸಿ ಪತ್ರಿಕೆ ಸಂಪಾದಕರ ಸಂಘ ನೀಡಿದ ಮನವಿಗೆ ಸ್ಪಂದಿಸಿದ ಸಿಎಂ ಸಣ್ಣ ಪತ್ರಿಕೆಗಳ ನೆರವಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದೂ ಅವರು ಹೇಳಿದರು..!

ರಾಜ್ಯ ಸರ್ಕಾರ ಹಿಂದಿನ ವರ್ಷದಂತೆ ಈ ವರ್ಷವೂ ಹಿಂದುಳಿದ ವರ್ಗಗಳ ಪತ್ರಿಕೆಗೆ ಪ್ರೋತ್ಸಾಹದಾಯಕ ಜಾಹೀರಾತು ನೀಡಲಿದೆ ಎಂದೂ ಭರವಸೆಯನ್ನು ನೀಡಿದರು..!

3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ..! —

ಸರ್ಕಾರದ ಆದೇಶವನ್ನು ಜಾಹೀರಾತು ನೀತಿಯಲ್ಲಿ ಸೇರಿಸಲಾಗುವುದು. ಬಡ ವರ್ಗ ಹಾಗೂ ಗ್ರಾಮೀಣ ಭಾಗದ ಸುದ್ದಿಗಳನ್ನು ಪ್ರಕಟಿಸುವ ಪತ್ರಿಕೆಗಳ ಜೊತೆಯಲ್ಲಿ ಸರ್ಕಾರ ನಿಲ್ಲಲಿದೆ ಎಂದು ಅವರು ತಿಳಿಸಿದರು..!

ಸಂಘದ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕಬ್ಬೂರು ಮನವಿಯನ್ನು ನೀಡಿ ಮಾತನಾಡಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಕಚ್ಚಾ ಸಾಮಗ್ರಿಯ ಬೆಲೆ ಹೆಚ್ಚಳದಿಂದ ಮುನ್ನಡೆಸುವುದು ದುಸ್ತರವಾಗಿದೆ..!

ಗ್ರಾಮೀಣ ಭಾಗದ ಸುದ್ದಿ ಜೊತೆಗೆ ಸರ್ಕಾರಗಳ ಕಾರ್ಯಕ್ರಮಗಳನ್ನು, ಯೋಜನೆಗಳ ಸುದ್ದಿಗಳನ್ನು ಸಹ ಸಣ್ಣ ಪತ್ರಿಕೆಗಳೇ ಹೆಚ್ಚಾಗಿ ಪ್ರಕಟಿಸಿ ಪ್ರಚಾರ ಮಾಡುತ್ತವೆ ಎಂದರು ಅವರು..!

ಪ್ರಸ್ತುತ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಉತ್ತೇಜಿತ ಜಾಹೀರಾತು ಯೋಜನೆ ಜೊತೆಯಲ್ಲಿ ಬಹುವರ್ಣದ ಮುದ್ರಣ ಯಂತ್ರ ನೀಡುವಂತೆ ಮನವಿ ಮಾಡಿದರು..!

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮುದ್ರಣ ಯಂತ್ರ ನೀಡುವ ಕುರಿತು ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು..!

ಕರ್ನಾಟಕ ಒಬಿಸಿ ಪತ್ರಿಕೆ ಸಂಪಾದಕರ ಸಂಘದ ಗೌರವಾಧ್ಯಕ್ಷ ಬೆಳಗಾವಿಯ ರಾಜು ನದಾಫ್, ದಾವಣಗೆರೆಯ ಎ. ಫಕೃದ್ದೀನ್, ರಾಮನಗರದ ಡಿ.ಎಂ. ಮಂಜುನಾಥ್, ಬೀದರ್‌ನ ಶಶಿ ಪಾಟೀಲ್, ರಾಯಚೂರಿನ ವೀರಾ ರೆಡ್ಡಿ, ರಾಯಚೂರಿನ ಈರಪ್ಪ ಹಾಗೂ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಅಲ್ಲದೇ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ಇದ್ದರು..!

ಕೆ.ಶಿವು.ಲಕ್ಕಣ್ಣವರ

Leave a Reply

Your email address will not be published. Required fields are marked *