ಶಾಸಕ ಡಾ|| ಸಿ. ಎನ್. ಅಶ್ವಥನಾರಾಯಣರವರಿಂದ ”ಶ್ರೀ ರಾಘವೇಂದ್ರ ವ್ಯೆಭವ”ದ ಉದ್ಘಾಟನೆ

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಜನರಿಂದ ಹೆಚ್ಚು ಆಧರಿಸಲ್ಪಡುವ ಬಹು ಬೇಡಿಕೆಯ ಕ್ಷೇತ್ರಗಳ ಪೈಕಿ ಆಹಾರವನ್ನು ಒದಗಿಸುವ ಹೋಟೆಲ್ ಗಳ ಪ್ರಾಮುಖ್ಯತೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಜನರು ತಮಗಿಷ್ಟವಾದ ಶುಚಿ ರುಚಿಯಾದ ಊಟ ತಿಂಡಿ ತಿನಿಸುಗಳನ್ನು ಸವಿಯಲು ನಗರದ ಆ ಮೂಲೆಯಿಂದ ಈ ಮೂಲೆಗೆ ಬೇಕಾದರೂ ಹೋಗಿ ತಮ್ಮ ಜೀವಹ್ಯಾ ಚಪಲವನ್ನು ತಣಿಸಿಕೊಳ್ಳುವ ವಿಚಾರ ಹೊಸದೇನಲ್ಲ…
ಆ ನಿಟ್ಟಿನಲ್ಲಿ ತಮ್ಮ ಸ್ಥಳದಿಂದ ದೂರದಲ್ಲಿರುವ ಪ್ರಖ್ಯಾತ ಹೋಟೆಲ್ ಒಂದಕ್ಕೆ ಹೋಗಿ ಗ್ರಾಹಕರು ತಮ್ಮ ಮನ ಮೆಚ್ಚಿನ ಆಹಾರಗಳನ್ನು ಸವಿಯಲು ಕಾತರಿಸುವಂತೆ, ಅಂಥ ಗ್ರಾಹಕರ ಅನುಕೂಲಕ್ಕಾಗಿಯೇ ಬಹು ಬೇಡಿಕೆಯ ಮೇರೆಗೆ, ಗ್ರಾಹಕಾಭಿಮಾನಿ ದೇವರುಗಳ ಸಮೀಪಕ್ಕೆ ಆ ಹೋಟೆಲ್ ತನ್ನ ಮತ್ತೊಂದು ಶಾಖೆಯನ್ನು ಪ್ರಾರಂಭಿಸಿರುವ ಹೆಗ್ಗಳಿಕೆ ಹಾಗೂ ಸಡಗರಕ್ಕೆ ದಾಸರಹಳ್ಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಸವಿರುಚಿಯ ಆಹಾರಕ್ಕಾಗಿ ಹೆಸರುವಾಸಿಯಾಗಿರುವ “ರೈತನ ಅರಮನೆ” ಖ್ಯಾತಿಯ ಹೋಟೆಲ್ ನ ಮಾಲೀಕತ್ವ ಹಾಗೂ ಆಡಳಿತ ನಿರ್ವಹಣೆಯಲ್ಲಿ ಗುರುವಾರ ಸಂಜೆ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಎಂ. ಎಸ್. ರಾಮಯ್ಯ ಕಾಲೇಜ್ ಬಸ್ ನಿಲ್ದಾಣದ ಸಮೀಪದಲ್ಲಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳೂ ಆಗಿರುವ ಡಾ|| ಸಿ. ಎನ್. ಅಶ್ವಥನಾರಾಯಣರವರಿಂದ ಸುಸಜ್ಜಿತವಾದ ನೂತನ ಶಾಖೆ “ಶ್ರೀ ರಾಘವೇಂದ್ರ ವ್ಯೆಭವ” ಶುದ್ಧ ಸಸ್ಯಹಾರಿ ಹೋಟೆಲ್ ಉದ್ಘಾಟನೆ ನೆರವೇರಿದ
ಅಪೂರ್ವಕ್ಷಣದಲ್ಲಿ ಗಣ್ಯರುಗಳಾದ ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷರು ರಾಘವೇಂದ್ರ ಶೆಟ್ಟಿ, ಚಿತ್ರನಟ ಗಣೇಶ್ ರಾವ್ ಕೇಸರ್ಕರ್, ಮಲ್ಲೇಶ್ವರಂ ಬಿಜೆಪಿ ಮುಖಂಡರಾದ ನಿಂಗರಾಜು, ಹನುಮೇಶ್ ಮುಂತಾದವರೊಂದಿಗೆ ಹೋಟೆಲ್ ನ ಪಾಲುದಾರರಾದ ರೈತ ಹಿನ್ನೆಲೆಯ ಯುವ ಉದ್ಯಮಿಗಳಾದ ಮಂಜುನಾಥ್, ಆನಂದ್, ರಂಗನಾಥ್, ಭೋಗೇಶಪ್ಪರವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ನೂತನ ಶಾಖೆಗೆ ಶುಭ ಹಾರೈಸಿದರು ಈ ವೇಳೆ ಆಯೋಜಿಸಲಾಗಿದ್ದ ಚಂಡೇ ವಾದ್ಯ ಹಾಗೂ ಡೊಳ್ಳು ಕುಣಿತವು ಆಕರ್ಷಣೆಯ ಕೇಂದ್ರವಾಗಿತ್ತು. ನೂತನ ಶಾಖೆಯಲ್ಲಿಯೂ ತಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುಚಿ ರುಚಿಯಾದ ಆಹಾರಗಳನ್ನು ಪೂರೈಸುವ ತಮ್ಮ ವಿಶೇಷತೆಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ, ಆರಂಭದ ಉಡುಗೊರೆಯಾಗಿ ಗ್ರಾಹಕರಿಗೆ ಮುಂದಿನ ಕೆಲ ವಾರಗಳ ಕಾಲ ಕೇವಲ ಐದು ರೂಪಾಯಿಗೆ ಟೀ, ಕಾಫಿಯ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ಸಣ್ಣಪುಟ್ಟ ಸಮಾರಂಭಗಳನ್ನು ಆಯೋಜಿಸಲು ಅನುಕೂಲಕರವಾಗುವ ಪಾರ್ಟಿ ಹಾಲ್ ಸೌಲಭ್ಯವು ಸಹ ಈ ಶಾಖೆ ಹೊಂದಿದೆ ಎಂದು ಮಂಜುನಾಥ್ ರವರು ತಿಳಿಸಿರುತ್ತಾರೆ.