ಸಾರ್ವಜನಿಕರ ಜೀವರಕ್ಷಣೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಿ.ಸಿ.ಕ್ಯಾಮರಾ ಸಹಕಾರಿ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ: ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಸಿ.ಸಿ. ಕ್ಯಾಮೆರ ಕಂಟ್ರೋಲ್ ರೂಂ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ರವರು, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಹಾಗೂ ಡಿ.ಸಿ.ಪಿ.ಶಿವಪ್ರಕಾಶ್ ದೇವರಾಜ್ ರವರು ಹಾಗೂ ಎ.ಸಿ.ಪಿ.ಮನೋಜ್ ಇನ್ಸಪೆಕ್ಟರ್ ಆರ್.ಪಿ.ಅಶೋಕ್ ರವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ 106ಪ್ರಮುಖ ರಸ್ತೆಗಳಿಗೆ 281ನೂತನ ತಂತ್ರಜ್ಞಾನದ ಸಿ.ಸಿ.ಕ್ಯಾಮೆರ ಆಳವಡಿಸಲಾಗಿದೆ .

ಸಿ.ಸಿ.ಕ್ಯಾಮೆರಗಳು ಬೀಟ್ ಪೊಲೀಸ್ ರಂತೆ ಕಾರ್ಯನಿರ್ವಹಿಸಲಾಗಿದೆ. ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ 250ಕ್ಯಾಮೆರ ಆಳವಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಿ.ಸಿ.ಕ್ಯಾಮೆರಗಳಿಗೆ ಮೈಕ್ ಆಳವಡಿಸಲಾಗುವುದು.

ಸಾರ್ವಜನಿಕರ ಜೀವ ರಕ್ಷಣೆಗೆ ಸಿ.ಸಿ.ಕ್ಯಾಮೆರ ಸಹಕಾರಿಯಾಗಿದೆ ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ರವರು ಮಾತನಾಡಿ ಜನರ ಸುರಕ್ಷತೆ ಮತ್ತು ಆಸ್ತಿಪಾಸ್ತಿ ರಕ್ಷಣೆಗಾಗಿ ಸಿ.ಸಿ.ಕ್ಯಾಮೆರ ಆಳವಡಿಸಲಾಗಿದೆ . ಪೊಲೀಸ್ ರ ಅನುಪಸ್ಥಿತಿಯಲ್ಲಿ ಕ್ಯಾಮೆರಗಳು ಕಾರ್ಯನಿರ್ವಹಿಸಲಿದೆ.

ಅಪರಾಧ ಚಟುವಟಿಕೆ ನಿಗ್ರಹ ಮತ್ತು ಸುಗಮ ವಾಹನ ಸಂಚಾರಕ್ಕೆ ಸಿ.ಸಿ.ಕ್ಯಾಮೆರ ಮೂಲಕ ನಿಯಂತ್ರಣ ಮಾಡಬಹುದು.

ಸಾರ್ವಜನಿಕರ ಸಮಸ್ಯೆಗಳ ದೂರು ನೀಡಲು ವಾಟ್ಸಪ್ ನಂಬರ್ ನೀಡಲಾಗಿದೆ ಅದರಲ್ಲಿ ಸ್ಥಳ ಮಾಹಿತಿ ,ವಿಡಿಯೊ ಹಾಕಬಹುದು ದೂರು ಬಂದ ತತಕ್ಷಣ ಸಾರ್ವಜನಿಕರ ನೆರವಿಗೆ ಹೊಯ್ಸಳ ಧಾವಿಸುತ್ತದೆ ಎಂದು ಹೇಳಿದರು.

ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯ ರಾಜಣ್ಣ, ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಲಕ್ಷ್ಮೀನಾರಾಯಣ, ಸುದರ್ಶನ್ ,ಅಮಿತ್ ಜೈನ್ ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *