ಶಾಸ್ತ್ರೋಕ್ತವಾಗಿ ದುರ್ಗಾಪೂಜೆಯನ್ನು ನೆರವೇರಿಸಿದ ರಾಘವೇಂದ್ರ ಶೆಟ್ಟರು

ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರು ರಾಘವೇಂದ್ರ ಶೆಟ್ಟಿರವರು ತಮ್ಮ ಧರ್ಮಪತ್ನಿ ಶ್ರೀಮತಿ ಸುನಂದಾ ಹಾಗೂ ಸುಪುತ್ರ ಆದಿತ್ಯ ಸಮೇತರಾಗಿ ತಮ್ಮ ನಿವಾಸದಲ್ಲಿ ಶ್ರೀ ದುರ್ಗಾ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಭಕ್ತಿ ಶ್ರದ್ದೆಗಳಿಂದ ಗುರುಗಳ ಮುಖೇನ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಹರೀಶ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷರಾದ ನಾರಾಯಣಗೌಡ, ನೆ.ಲ. ನರೇಂದ್ರಬಾಬು ಮುಂತಾದ ಅನೇಕ ಗಣ್ಯರೊಡನೆ ಬಂಧು ಮಿತ್ರರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಅಮ್ಮನವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಭಕ್ತಾದಿಗಳೆಲ್ಲರಿಗೂ ಈ ಸಂದರ್ಭದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.