ಗೃಹ ಜ್ಯೋತಿ : ಮೊದಲ ದಿನ 55000 ಗ್ರಾಹಕರ ನೋಂದಣಿ

ಬೆಂಗಳೂರು: ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ರ‍್ಕಾರ ಜಾರಿಗೆ ತಂದಿರುವ ‘ಗೃಹ ಜ್ಯೋತಿ ಯೋಜನೆಯ ನೋಂದಣಿಯು ಸೇವಾ ಸಿಂಧು ಪರ‍್ಟಲ್ ನಲ್ಲಿ ಭಾನುವಾರ (ಜೂನ್ 18) ಆರಂಭಗೊಂಡಿತು.

ಭಾನುವಾರ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ನೋಂದಣಿ ಪ್ರಕ್ರೀಯೆ ರಾಜ್ಯದ ಎಲ್ಲಾ ಕರ‍್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿತು, ನೋಂದಣಿಯನ್ನು ಸೇವಾ ಸಿಂಧು ಪರ‍್ಟಲ್ https://sevasindhugs.karnataka.gov.in  ಮೂಲಕ ಮಾಡಲಾಗಿದ್ದು, ಸರ‍್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಇ ಆಡಳಿತ ಇಲಾಖೆ ನೋಂದಣಿ ಪ್ರಕ್ರೀಯೆನ್ನು ಸರಳೀಕರಣಗೊಳಿಸಿದ್ದು, ಗ್ರಾಹಕರು ವಿದ್ಯುತ್ ಬಿಲ್ ನಲ್ಲಿರುವ ಖಾತೆ ಸಂಖ್ಯೆ, ತಮ್ಮ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 

ಭಾನುವಾರ ರಜಾ ದಿನವಾದರೂ, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ರ‍್ತವ್ಯಕ್ಕೆ ಹಾಜರಾಗಿ ಯೋಜನೆ ನೋಂದಣಿಯ ಮೇಲುಸ್ತುವಾರಿವಹಿಸಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡರು. 

ಗ್ರಾಹಕರು ಯೋಜನೆ ನೋಂದಣಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಮೊಬೈಲ್, ಲ್ಯಾಪ್ ಟಾಪ್ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಸಂರ‍್ಕಿಸಿ, ಇಲ್ಲವೆ 24×7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ

ಜೂನ್ ವಿದ್ಯುತ್ ಬಿಲ್ ಕುರಿತು ಬೆಸ್ಕಾಂ ಸ್ಪಷ್ಟೀಕರಣ
ಬೆಂಗಳೂರು: ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯವು ಪ್ರಗತಿಯಲ್ಲಿರುವ ಕಾರಣ ಗ್ರಾಹಕರಿಗೆ ಆನ್ ಲೈನಲ್ಲಿ ಋಣಾತ್ಮಕ ಬಿಲ್ಲುಗಳು ಬಂದಿದೆ, ಇದನ್ನು ಎರಡು ದಿನಗಳ ಒಳಗಾಗಿ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಗ್ರಾಹಕರಿಗೆ ನೀಡಿರುವ ಭೌತಿಕ ಬಿಲ್ಲಿನಲ್ಲಿ ಸರಿಯಾದ ಬಿಲ್ ಮೊತ್ತ ನಮೂದಾಗಿರುತ್ತದೆ, ಆ ಮೊತ್ತವನ್ನು ಆನ್ ಲೈನ್ ಪಾವತಿಯಲ್ಲಿ ನಮೂದಿಸಿ ಪಾವತಿಸಾಲು ಕೋರಲಾಗಿದೆ.
ಬಿಲ್ ಕುರಿತು ಗೊಂದಲಗಲಿದ್ದರೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದೆ ಸಂಬಂದಿಸಿದ ಉಪ ವಿಬಾಗಕ್ಕೆ ಬೇಟಿ ನೀಡಿ ಅಥವಾ 1912 ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಗ್ರಾಹಕರಿಗೆ ಅವರ ಬಳಕೆಗೆ ಅನುಗುಣವಾಗಿ ಮಾತ್ರವೇ ಬಿಲ್ಲನ್ನು ನೀಡಿದ್ದು ಯಾವುದೇ ಅಧಿಕ ಶುಲ್ಕವನ್ನು ನೀಡಿರುವುದಿಲ್ಲ. ಜೂಲೈ ತಿಂಗಳಲ್ಲಿ ಯಾವುದೇ ಬಿಲ್ಲಿಂಗ್ ಸಮಸ್ಯೆಗಳು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Leave a Reply

Your email address will not be published. Required fields are marked *