“ಮಕ್ಕಳ ಧ್ವನಿಗೆ ಧ್ವನಿಯಾಗೋಣ” ಅಭಿಯಾನ –ವರದಿ

 ಪಡಿ, ಮಂಗಳೂರು ಸಂಸ್ಥೆಯು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಹಕ್ಕಿನ ರಕ್ಷಣೆಗೆ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದ್ದು ಪ್ರತಿಯೊಂದು ಮಗುವಿಗೆ ಶಿಕ್ಷಣ ಹಕ್ಕು ಕಾಯಿದೆಯ ಸವಲತ್ತುಗಳು ಸಿಗುವುದರ ಮೂಲಕ ನಾಡಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ನಮ್ಮೆಲ್ಲರ ಆಶಯ.

ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಶಿಕ್ಷಣ, ಫೋಕ್ಸೋ ಕಾಯಿದೆ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಅತಿಯಾದ ಮೊಬೈಲ್‌ ಬಳಕೆ, ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ಮತ್ತು ಸಮುದಾಯಕ್ಕೆ ಕಿರುಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳ ಜೊತೆ ಮತ್ತು ಸಮುದಾಯದ ಜೊತೆ ಚರ್ಚೆ ನಡೆಸಿ, ಪಡಿ ಸಂಸ್ಥೆಯ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ

ಈ ನಿಟ್ಟಿನಲ್ಲಿ ಪಡಿ ಸಂಸ್ಥೆಯು ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಸ್ಥಳೀಯ ಸರ್ಕಾರಗಳ  ಸಹಕಾರ ಮತ್ತು ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಮಕ್ಕಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣಅಭಿಯಾನ ಎನ್ನುವ ಶೀರ್ಷಿಕೆಯಡಿ ಯಲ್ಲಿ, ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 19.06.2023 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುತ್ತಾರು,ಮುನ್ನೂರು ಇಲ್ಲಿ ನಡೆಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿದ ಶ್ರೀಮತಿ ಶೋಭ ಬಿ.ಜಿ, ಗೌರವಾನ್ವಿತ ಹಿರಿಯ ಸಿವಿಲ್‌ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಇವರು ಮಕ್ಕಳು ಮತ್ತು ಸಮುದಾಯವನ್ನು ಉದ್ದೇಶಿಸಿ “ಪ್ರಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಕುರಿತಾಗಿಯೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ . ಕೋರೊನ ಕಾರಣದಿಂದ ಆನ್‌ಲೈನ್‌ ಶಿಕ್ಷಣ ಪ್ರಾರಂಭದ ನಂತರ ಮಕ್ಕಳು ಅತಿಯಾಗಿ ಮೊಬೈಲ್‌ ಬಳಕೆ ಮಾಡುತ್ತಿದ್ದು ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಮೊಬೈಲ್‌ ಬಳಕೆಯ ಅನುಕೂಲ ಹಾಗೂ ಅನಾನುಕೂಲಗಳನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು. ಮಕ್ಕಳ ಶಿಕ್ಷಣ ಮತ್ತು ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಮಕ್ಕಳ ರಕ್ಷಣೆಯ ಕುರಿತಾದ ನೀಡಿದ ಕೆಲವು ಆದೇಶಗಳು, ಸುತ್ತೋಲೆಗಳು ಜನರು ತಿಳಿದಿರಬೇಕು, ಸರಕಾರದ ಯೋಜನೆಗಳು, ಯೋಚನೆಗಳು ಜನಸಾಮಾನ್ಯರನ್ನು ತಲುಪಬೇಕು ʼʼ ಎಂದು ಅವರು ಹೇಳಿದರು.

ನಂತರ ಪ್ರಾಸ್ತಾವಿಕ ಮಾತನಾಡಿದ ಶ್ರೀಯುತ ರೆನ್ನಿ ಡಿಸೋಜ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಡಿ ಸಂಸ್ಥೆ ಮಂಗಳೂರು ಇವರು ಕಾರ್ಯಕ್ರಮದ ಉದ್ದೇಶ, ರೂಪುರೇಷೆಗಳನ್ನು ವಿವರಿಸಿದರು.

ತದನಂತರ ಫೋಕ್ಸೋ ಕಾಯಿದೆ (ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯಿದೆ), ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಅತಿಯಾದ ಮೊಬೈಲ್‌ ಬಳಕೆ ಕುರಿತಾದ ಕಿರುಚಿತ್ರಗಳನ್ನು ಪ್ರರ್ದಶಿಸಿ ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಯುತ ರೆನ್ನಿ ಡಿಸೋಜ ಹಾಗೂ ಶ್ರೀಮತಿ ಕಮಲಾ ಗೌಡ ಶಾಲಾ ಮಕ್ಕಳಿಗೆ ಮತ್ತು ಸಮುದಾಯಕ್ಕೆ ಮಕ್ಕಳ ಹಕ್ಕು ಹಾಗೂ ರಕ್ಷಣೆಯ ಕುರಿತು ಅರಿವು ಮೂಡಿಸಿದರು.  

ಶ್ರೀ ರವೀಂದ್ರ ಆರ್‌ ನಾಯಕ್‌, ಪಿ.ಡಿ.ಒ ಮುನ್ನೂರು ಗ್ರಾಮ ಪಂ, ಶ್ರೀಮತಿ ಶಾಂತಿ ಎ, ಕಾರ್ಯದರ್ಶಿ ಮುನ್ನೂರು ಗ್ರಾಮ ಪಂ ಹಾಗೂ ಪಂಚಾಯತ್‌ ಸದಸ್ಯರು, ಶ್ರೀ ಹರ್ಷ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ,ಶ್ರೀಮತಿ ಸೀತಾ ಕೆ, ಅಂಗನವಾಡಿ ಮೇಲ್ವಿಚಾರಕರು,  ಶ್ರೀಮತಿ ನಯನಾ ರೈ, ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ರಿ. ದ.ಕ ಜಿಲ್ಲೆ, ಸದಸ್ಯರು ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು, ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.  

IMG-20230619-WA0008.jpg
IMG-20230619-WA0007.jpg

Leave a Reply

Your email address will not be published. Required fields are marked *