ಪಡಿತರ ಅಕ್ಕಿಗುರುತಿಸಲು ಪೋಷಕಾಂಶಗಳ ಲೇಪನ.

ಹೌದು ಗಲೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಕಾರ ನೀಡುತ್ತಿರುವ 5 ಕೆಜಿ ಅಂತ ಎಲ್ಲರಿಗೂ ತಿಳಿದಿದೆ ಅಲ್ಲದೆ ರಾಜ್ಯ ಸರ್ಕಾರಗಳು ನೀಡುತ್ತಿರುವ ಅಕ್ಕಿ ಪ್ರತ್ಯೇಕ. ಈ ಪಡಿತರ ಅಕ್ಕಿಯಲ್ಲಿ ಗದ್ದಲವು ಗದ್ದಲ ಅಂತ ಹಲವರ ಅಭಿಪ್ರಾಯವಿದೆ ಇದೇ ಅಕ್ಕಿ ಪುನಃ ಅಕ್ಕಿ ಗರಣಿಗಳಿಗೆ ಹೋಗಿ ಅಲ್ಲಿಂದ ಪುನಃ ಹೊರ ಬರುತ್ತವೆ ಅಂತ ಕೆಲವರ ಸಂಶಯ.ಅಂದರೆ ಏನು ಪ್ರಶ್ನಿಸಿದಾಗ ಪಡಿತರ ಅಕ್ಕಿನೆ ಚೀಲ ಬದಲಾವಣೆಯೊಂದಿಗೆ ಪುನಹ ಸರ್ಕಾರಕ್ಕೆ ವಿತರಿಸಲಾಗುತ್ತದೆ ಅಂತೆ ಕಂತೆ ?.

ಈ ಪಡಿತರ ಗುರುತು ತಿಳಿಯುವಂತೆ ಏನಾದರೂ ವಿಶೇಷ ಕ್ರಮ ಕೇಂದ್ರ ಸರ್ಕಾರ ಕೈಗೊಳ್ಳಬಹುದು ಇದರಿಂದಾಗಿ ಕೇಂದ್ರ ಸರ್ಕಾರ ಕೊಟ್ಟಂತಹ ಯಾವುದು ಎಂದು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.ಅಲ್ಲಿಗೆ ಕೇಂದ್ರ ನಾ ಕೊಟ್ಟಿದ್ದು ರಾಜ್ಯ ಸರ್ಕಾರ ತಾನು ಕೊಟ್ಟಿದ್ದು ಹೇಳುವಂತಹ ಜಗಳ ಅಲ್ಲಿಗೆ ಮುಕ್ತಾಯವಾಗುತ್ತದೆ. ಇದರಿಂದಾಗಿ ಅನವಶ್ಯಕವಾಗಿ ರಾಜಕಾರಣಿಗಳು ಹೇಳಿಕೆ ನೀಡುವುದು ಹಾಗೂ ಅದನ್ನು ಮುದ್ರಿಸುವಂತಹ ಪ್ರಮೇಯವೇ ಬರೆದು.

ಕೇಂದ್ರ ಸರ್ಕಾರ ಯುರಿಯಾ ಗೊಬ್ಬರದ ದುರುಪಯೋಗ ತಡೆಯಲು ಯುರಿಯ ಹರಳಿಗೆ ನೀಮ್ ಕೋಟಿಂಗ್ ಪ್ರಾರಂಭಿಸಿತು ಇದರಿಂದ ಯುರಿಯ ಹರಳಿನ ಬಣ್ಣದಲ್ಲಿ ಬದಲಾವಣೆಯಾಗಿತ್ತು. ಇದರಿಂದ ಸರ್ಕಾರ ನೀಡಿದಂತಹ ಯುರಿಯ ದುರುಪಯೋಗ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದ ಉಳಿತಾಯಕ್ಕೆ ಕಾರಣವಾಗಿತ್ತು.

ಹೇಗೆ ಸೀಮೆಎಣ್ಣೆ ಸರ್ಕಾರ ಪೂರೈಸುವ ಕಾಲದಲ್ಲಿ ಪಡಿತರ ಸೀಮೆಎಣ್ಣೆಗೆ ಬಣ್ಣವನ್ನು ನಿಗದಿಗೊಳಿಸಿತು ಅದೇ ರೀತಿ ಪಡಿತರವಾಗಿ ನೀಡುವಂತಹ ಉಚಿತವಾಗಿ ನೀಡುವಂತಹ ಅಕ್ಕಿಗೆ ಹೆಚ್ಚಿನ ಪೋಷಕಾಂಶಗಳು ಇರುವ ಒಂದು ಲೇಪನದ ನಿಯೋಜನೆ ಮಾಡಿದರೆ ಜನತೆಗೆ ಪೋಷಕಾಂಶಗಳು ಲಭಿಸಿದಂತಾಯಿತು ಅಲ್ಲದೆ ಪಡಿತರ ಅಕ್ಕಿಯ ದುರುಪಯೋಗ ತಡೆದಂತಾಯಿತು.

ಇದರಿಂದ ಉಚಿತ ಪಡೆದಂತಹ ಜನರು ಅಂಗಡಿಗಳಿಗೆ ಮಾರಾಟ ಮಾಡಿದಾಗ ಇದು ಪಡಿತರ ಅಕ್ಕಿಎಂದು ಗುರುತಿಸುವುದು ಸುಲಭವಾಗಬಹುದು ಅಲ್ಲದೆ ಅಕ್ಕಿಯ ಗಿರಣಿಗಳು ಇದನ್ನ ಪುನಃ ವ್ಯವಸ್ಥೆಗೆ ತರುವುದು ಸುಲಭವಾಗಿ ತಡೆಯಬಹುದು.

ಈಗಾಗಲೇ ವಿಶ್ವಸಂಸ್ಥೆ fortified ಅಂದರೆ ವಿಶೇಷ ಪೋಷಕಾಂಶಗಳಿಂದ ಭರಿತ ಆಹಾರ ಅವಶ್ಯಕ ಎಂದು ಹೇಳಿದೆ ಅದರಂತೆ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಇದನ್ನು ಜಾರಿಗೆ ತರಬಹುದು.

ಡಾ ರವಿಕಿರಣ ಪಟವರ್ಧನಆಯುರ್ವೇದ ವೈದ್ಯರು ಶಿರಸಿ.

Leave a Reply

Your email address will not be published. Required fields are marked *