ಬ್ರಾಹ್ಮಣ ಸಮುದಾಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಸಹಾಯ,ಸಹಕಾರ ನೀಡಲಿದೆ-ದಿನೇಶ್ ಗುಂಡೂರಾವ್

ಬಸವನಗುಡಿ: ಎ.ಪಿ.ಎಸ್.ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ವತಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಶೀಲರಾದ ವಿಪ್ರ ಶಾಸಕರಿಗೆ ಸನ್ಮಾನ ಸಮಾರಂಭ.

ದಿವ್ಯ ಸಾನಿದ್ಯ ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಮಹಾಸ್ವಾಮಿಗಳು, ಅಧ್ಯಕ್ಷರಾದ ಆಶೋಕ್ ಹಾರನಹಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ,
ಶಾಸಕರುಗಳಾದ ಆರ್.ವಿ.ದೇಶಪಾಂಡೆ, ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ,ಉದಯ್ ಗರುಡಾಚಾರ್, ಶ್ರೀವತ್ಸ, ವಿಶ್ವಾಸ್ ವೈದ್ಯರವರುಗಳಿಗೆ ಸನ್ಮಾನಿಸಲಾಯಿತು.

ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಗಳು ಮಾತನಾಡಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ತ್ರಿಮತಸ್ಥ ಬ್ರಾಹ್ಮಣರನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ.

ಶಂಕರಚಾರ್ಯ, ರಾಮಾನುಜ,ಮಧ್ವಚಾರ್ಯರವರು ಸಿದ್ದಾಂತ ಪ್ರತಿಪಾದನೆಯಲ್ಲಿ ರಾಷ್ಟ್ರ ಚನ್ನಾಗಿರಲಿ ,ಮನುಕುಲ ಉದ್ದರಕ್ಕೆ ಪ್ರತಿಪಾದಿಸಿದರು.

ಶಂಕರಚಾರ್ಯರಿಂದ ವೇದ ಉದ್ದರವಾಯಿತು, ಬ್ರಾಹ್ಮಣರು ಸ್ವಾರ್ಥಿಗಳಲ್ಲ, ಪರ ಹಿತಬಯಸುವವರು. ಸಮಾಜದಲ್ಲಿ ಉತ್ತಮ, ಸೌಹರ್ದ ನಿರ್ಮಾಣಕ್ಕೆ ಪ್ರಯತ್ನ ಪಟ್ಟರು.

ಅತಿ ಕೆಳ ಸಮುದಾಯದ ವ್ಯಕ್ತಿಗಳನ್ನು ಸರಿಸಮಾನವಾಗಿ ಕಂಡ ಮಹಾನ್ ಸಂತ ರಾಮಾನುಜರು. ಬ್ರಾಹ್ಮಣ ಎಂದರೆ ಬೇರೆಯವರು ಹಿತ ಬಯುಸುವುದು ಎಂದು ಹೇಳಿದರು.

ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ನಮ್ಮ ಸಮಾಜದ ವಿಚಾರ ಬಂದರೆ ನಾವೆಲ್ಲರು ಒಗ್ಗಾಟಗಿ ಸಂಘಟಿತರಾಗಿ ಹೋರಾಟ ಮಾಡಬೇಕು. ಬ್ರಾಹ್ಮಣ ಸಮುದಾಯದಲ್ಲಿ ಡೊಡ್ಡ ವ್ಯಕ್ತಿಗಳು ಬಹಳ ಜನ ಇದ್ದಾರೆ, ವಿಪ್ರ ಸಮುದಾಯದ ಅಭಿವೃದ್ದಿಗೆ ಅವರು ಕೈಜೋಡಿಸಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *