ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲಸಿದ ಕಟ್ಟಡ ಹಾಗೂ ಕೂಲಿ ಕಾರ್ಮಿಕರ ಕುಟುಂಬ ಮಕ್ಕಳ ಸಮೀಕ್ಷೆ ಮಾಡಿ ಅವರನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯ ನೂರಾರು ಮಂದಿ ಸದಸ್ಯರು ಹಾಗೂ ಕಟ್ಟಡ ಕಾರ್ಮಿಕರು ಜನಜಾಗೃತಿ ಜಾಥಾ ನಡೆಸಿದರು.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಮುಂಭಾಗದಿಂದ ಬಾಳೆಕುಂದ್ರಿ ವೃತ್ತದ ತನಕ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟಿ ನೇತೃತ್ವದಲ್ಲಿ ಜನಜಾಗೃತಿ ಜಾಥ ನಡೆಸಲಾಯಿತು.
ಬೆಂಗಳೂರು ನಗರದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಎರಡು ಲಕ್ಷ ಮಕ್ಕಳಿದ್ದು ಅವರಲ್ಲಿ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಅವರನ್ನು ಶಾಲೆಗೆ ಸೇರಿಸಲು ವಿಶೇಷ ಅಭಿಯಾನ ನಡೆಸಬೇಕು ಎಂದು ಬಸವರಾಜ್ ಪಡುಕೋಟಿ ಸರ್ಕರವನ್ನು ಆಗ್ರಹಿಸಿದ್ದಾರೆ.
ನಮ್ಮ ಕರ್ನಾಟಕ ಸೇನೆ ಮತ್ತು ಕರುನಾಡ ಕಟ್ಟಡ ಕಾರ್ಮಿಕರ ಸಂಘ ಜನಜಾಗೃತಿ ಆಯೋಜಿತು.
ನಮ್ಮ ಕರ್ನಾಟಕ ಸೇನೆಯ ಉಪಾಧ್ಯಕ್ಷ ರಾಮ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಗಳಾದ ಕಮಲೇಶ್, ಲಕ್ಷ್ಮೀ ಹಾಗೂ
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗುರು ದೊಡ್ಮನಿ ಹಾಜರಿದ್ದರು.