ಶ್ರೀ ಶುಕ್ಲಯಜುಃಶಾಖಾ ಟ್ರಸ್ಟ್ ಹಾಗೂ ಕೋಡಿಹಳ್ಳಿ ಲಕ್ಷ್ಮೀನಾರಾಯಣ ಸ್ಮಾರಕ ದತ್ತಿ ವತಿಯಿಂದ ಗುರುಪೌರ್ಣಮಿ

ಶ್ರೀ ಗುರುಭ್ಯೋ ನಮಃ ಸಮಸ್ತ ಕಾಣ್ವಶಾಖೀಯ ಹಾಗೂ ವಿಪ್ರ ಬಾಂಧವರಲ್ಲಿ ವಿಜ್ಞಾಪನೆಗಳು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇದ ರಾಶಿಯನ್ನು ವಿಭಾಗ ಮಾಡಿದ ವೇದವ್ಯಾಸರ ಜನ್ಮದಿನವನ್ನು ಆಷಾಢ ಮಾಸದ ಪೂರ್ಣಿಮೆಯ ದಿನದಂದು ಗುರುಪೌರ್ಣಮಿ ಎಂದು ನಾವು ನಮ್ಮ ಸನಾತನ ಧರ್ಮದಲ್ಲಿ ಗುರುಗಳನ್ನು ಸ್ಮರಿಸುವ ದಿನವನ್ನಾಗಿ ಆಚರಣೆ ಮಾಡಿಕೊಂಡು ಬಂದಿರುತ್ತೇವೆ. ಹಾಗೆಯೇ ಈ ವರ್ಷವೂ ದಿನಾಂಕ 3.7.2023 ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ರ ಸಮಯದಲ್ಲಿ ಸೋಮವಾರದಂದು ಗುರು ಪೌರ್ಣಮಿ ಕಾರ್ಯಕ್ರಮವನ್ನು ಶ್ರೀ ಯಾಜ್ಞವಲ್ಕ್ಯ ಆಶ್ರಮದಲ್ಲಿ ಶ್ರೀ ಶುಕ್ಲಯಜುಃಶಾಖಾ ಟ್ರಸ್ಟ್ ಹಾಗೂ ಕೋಡಿಹಳ್ಳಿ ಲಕ್ಷ್ಮೀನಾರಾಯಣ ಸ್ಮಾರಕ ದತ್ತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಮಸ್ತ ವಿಪ್ರರೆಲ್ಲರೂ ಈ ಗುರು ಕಾರ್ಯದಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ಪ್ರಾರ್ಥಿಸುತ್ತೇವೆ.
ಇಂತಿ
ಅಧ್ಯಕ್ಷರು, ಕಾರ್ಯಕಾರಿ ಸಮಿತಿ.ಶ್ರೀ ಶುಕ್ಲಯಜುಃಶಾಖಾ ಟ್ರಸ್ಟ್
ಕೋಡಿಹಳ್ಳಿ ಲಕ್ಷ್ಮೀನಾರಾಯಣ ಸ್ಮಾರಕ ದತ್ತಿ.

Leave a Reply

Your email address will not be published. Required fields are marked *