ಕು|| ದಿಶಾ ಮಂಗನಹಳ್ಳಿ ಭರತನಾಟ್ಯ ರಂಗಪ್ರವೇಶ
ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ರೂವಾರಿ ‘ಕಲಾಭೂಷಿಣಿ’ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯ ಕು|| ದಿಶಾ ಮಂಗನಹಳ್ಳಿ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾಳೆ. ಇದೇ ಜೂನ್ 30, ಶುಕ್ರವಾರ ಸಂಜೆ 5-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ADA ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ|| ಎಂ. ಸೂರ್ಯಪ್ರಸಾದ್, ಗುರು.ಶ್ರೀಮತಿ ಉಷಾ ದಾತಾರ್, ಡಾ|| ಸಿ. ನಿರ್ಮಲಾ ಯಲಿಗಾರ್, ಮೃದಂಗ ವಿದ್ವಾನ್ ಶ್ರೀ ರೇಣುಕಾ ಪ್ರಸಾದ್, ಡಾ|| ವಿದ್ಯಾಕುಮಾರಿ ಆಗಮಿಸಲಿದ್ದಾರೆ.
ದಿಶಾ ರಂಗಪ್ರವೇಶ ಪ್ರಸ್ತುತಿಗೆ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ (ನಾಟುವಾಂಗ), ವಿ|| ಶ್ರೀಮತಿ ಭಾರತಿ ವೇಣುಗೋಪಾಲ್ (ಗಾಯನ), ವಿ|| ಎಸ್.ವಿ. ಗಿರಿಧರ್ (ಮೃದಂಗ), ವಿ|| ಸಿ. ಮಧುಸೂದನ್ (ಪಿಟೀಲು), ವಿ|| ಎಚ್.ಎಸ್. ವೇಣುಗೋಪಾಲ್ (ಕೊಳಲು), ವಿ|| ಡಿ.ವಿ. ಪ್ರಸನ್ನಕುಮಾರ್ (ರಿದಂಪಾಡ್).
ಭರವಸೆಯ ಪ್ರತಿಭೆ : ಕು|| ದಿಶಾ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್ ಸೀನಿಯರ್ ಹಾಗೂ ಗಂಧರ್ವ ಪರೀಕ್ಷೆ ಮಾಧ್ಯಮ ಪ್ರಥಮಗಳನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ದಿಶಾ ಪ್ರಸ್ತುತ ದೇವಾಂಗ ಕಾಲೇಜಿನಲ್ಲಿ ಅಂತಿಮ ವರ್ಷ ಬಿಕಾಂ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಯುವ ಕಲಾವಿದೆಯನ್ನು ಆಶೀರ್ವದಿಸಬೇಕೆಂದು ಶ್ರೀಮತಿ ದರ್ಶಿನಿ ಮಂಜುನಾಥ್ ಅವರು ವಿನಂತಿಸಿದ್ದಾರೆ.
