ಗ್ರಾಹಕ ಸ್ನೇಹಿ – ಚಾಲಕ ಸ್ನೇಹಿ “ನಮ್ಮ ಯಾತ್ರಿ ಆಪ್” ಹೆಚ್ಚು ಬಳಕೆಯಾಗಲಿ

ಗ್ರಾಹಕ ಸ್ನೇಹಿ – ಚಾಲಕ ಸ್ನೇಹಿ “ನಮ್ಮ ಯಾತ್ರಿ ಆಪ್” ಹೆಚ್ಚು ಬಳಕೆಯಾಗಲಿ

ಬೆಂಗಳೂರು : ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿದ್ದ ಎ ಆರ್ ಡಿ ಯು (ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್) ಕಛೇರಿಯನ್ನು ಇತ್ತೀಚಿಗೆ ಯಶವಂತಪುರದಲ್ಲಿನ ಪಾಲಿಕೆ ಸಂಕೀರ್ಣ (ಆರ್ ಟಿ ಓ) ದಲ್ಲಿನ ಮಳಿಗೆ ನಂ. 12 ಕ್ಕೆ ಬದಲಾಯಿಸಿದ್ದು, ನೂತನ ಕಛೇರಿ ಯಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು.
ಸಂಘದ ಗೌರವ ಅಧ್ಯಕ್ಷರಾದ ಧರಣೇಶ್ ರವರೊಂದಿಗೆ, ಅಧ್ಯಕ್ಷರಾದ ಟಿ. ಎಂ.ರಾಮಕೃಷ್ಣ,
ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಎ ಆರ್ ಡಿ ಯು ಹಿತೈಷಿಗಳಾದ ಸತ್ಯ ಹಾಗೂ “ನಮ್ಮ ಯಾತ್ರಿ ಆಪ್” ನ ಮುಖ್ಯಸ್ಥರು ಸಹ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ಸದಸ್ಯರುಗಳಾದ ಶ್ರೀಕಾಂತ್, ದೇವರಾಜು ಮುಂತಾದವರೊಂದಿಗೆ ಸಮಾಜ ಸೇವಕ ಗಿರೀಶ್ ಹಾಗೂ ಸಂಘದ ಸಕ್ರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಆಟೋ ಚಾಲಕರ ದೈನಂದಿನ ತಮ್ಮ ವೃತ್ತಿ ಜೀವನದ ಸಮಸ್ಯೆ ಸವಾಲುಗಳ ಬಗ್ಗೆ, ಸಂಘದ ಕಾರ್ಯಚಟುವಟಿಕೆ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಗಹನವಾದ ಚರ್ಚೆಯೊಂದಿಗೆ, ಸಂಘ ಹಾಗೂ ಸದಸ್ಯರ ನಡುವಿನ ಅನೇಕ ವಿಚಾರಗಳ ಪ್ರಶ್ನೋತ್ತರಕ್ಕೆ ಸಭೆ ಸಾಕ್ಷಿಯಾಯಿತು. ಗ್ರಾಹಕ ಸ್ನೇಹಿ – ಚಾಲಕ ಸ್ನೇಹಿ “ನಮ್ಮ ಯಾತ್ರಿ ಆಪ್” ನ ಮುಖಾಂತರವಾಗಿ ಆಟೋ ಚಾಲಕರಿಗೂ ಮುಖ್ಯವಾಗಿ ಗ್ರಾಹಕರಿಗೂ ಸಹ ಬಹಳ ಉಪಕಾರಿಯಾಗಿದ್ದು, ಈ ಆಪ್ ಬಳಕೆಯಿಂದಾಗಿ ಆಟೋ ಚಾಲಕರೂ ಹೆಚ್ಚು ಹಣವನ್ನು ನೇರವಾಗಿ ಗಳಿಸಬಹುದು ಹಾಗೂ ಗ್ರಾಹಕರಿಗೂ ಈ ಆಪ್ ಬಳಸುವುದರಿಂದ ಹೆಚ್ಚು ಹಣ ಉಳಿತಾಯ ಆಗುವ ಕಾರಣ ಈ ಆಪ್ ಬಳಕೆಯನ್ನು ಹೆಚ್ಚಾಗಿ ಆಟೋ ಚಾಲಕರು ಹಾಗೂ ಜನಸಾಮಾನ್ಯರು ಮಾಡುವ ನಿಟ್ಟಿನಲ್ಲಿ, ಚಾಲಕರು ಪ್ರಚಾರ ಹಾಗೂ ಜಾಗೃತಿಗೆ ಮುಂದಾಗಬೇಕಿದೆ ಎಂಬುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿ ತಿಳಿಸಲಾಯಿತು.

Leave a Reply

Your email address will not be published. Required fields are marked *