ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ!.. ಇ ಕೆ ವೈ ಸಿ ಗೆ ಜೂನ್ 30ಕ್ಕೆ ಕೊನೆಯ ದಿನ :

ಕೊಲ್ಹಾರ 27: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 14ನೇ ಕಂತಿನ ಹಣ ಪಡೆಯಲು ರೈತರ ಇ -ಕೆವೈಸಿ ಕಡ್ಡಾಯವಾಗಿದ್ದು,ಕೆವೈಸಿ ಅಪಡೇಟ್ ಮಾಡಿಕೊಳ್ಳಲು ಜೂನ್ 30ರವರೆಗೆ ಕಾಲಾವಕಾಶ ಒದಗಿಸಲಾಗಿದೆ ಎಂದು ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಫಾತಿಮಾಭಾನು ಸುತಾರ ಹಾಗೂ ಪುರೋಹಿತ ತಿಳಿಸಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಹಾರ ತಾಲೂಕಿನಲ್ಲಿ ಒಟ್ಟು 2816 ಫಲಾನುಭವಿಗಳ ರೈತರು ಇನ್ನೂ ಇ -ಕೆವೈಸಿ ಮಾಡಬೇಕಾಗಿದೆ ಎಂದರು.ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಕೃಷಿ ಸಖಿಯರು ಉಚಿತವಾಗಿ ಇ -ಕೆವೈಸಿ ಮಾಡಿಕೊಡುತ್ತಿದ್ದಾರೆ. ರೈತರು ಪಿ ಎಂ ಕಿಸಾನ್ ಜಾಲತಾಣದಲ್ಲಿ ನೇರವಾಗಿ ತಮ್ಮ ಮಾಹಿತಿಯನ್ನು ತುಂಬಬಹುದು.ಇಲ್ಲವಾದರೆ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಸೈಬರ್ ಸೆಂಟರ್ ಗಳಲ್ಲಿ ಇ -ಕೆವೈಸಿ ಮಾಡಬಹುದಾಗಿದೆ. ಇ -ಕೆವೈಸಿ ಗೆ ಇದೆ ತಿಂಗಳು ಜೂನ್ 30 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *