ಆಮ್ ಆದ್ಮಿ ಪಕ್ಷದಿಂದ ಸಾವಿನ ರಹಧಾರಿ ಅಭಿಯಾನ
ಬೆಂಗಳೂರು ಮೈಸೂರ್ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಕಳೆದ 9 ತಿಂಗಳುಗಳಿಂದ 158 ಜನರ ಅಪಘಾತದಲ್ಲಿ ಸಾವಿಗೀಡಾಗಿರುವ ವಿಷಯವು ಅತ್ಯಂತ ಗಂಭೀರವಾಗಿದೆ. ತರಾತುರಿಯಲ್ಲಿ ಸರ್ಕಾರಗಳ ಅವೈಜ್ಞಾನಿಕವಾದಂತ ಹಾಗೂ ಭ್ರಷ್ಟಾಚಾರ ಮಿಶ್ರಿತ ಯೋಜನೆಗಳಿಂದಾಗಿ ಅಮಾಯಕ ಜನತೆಯ ಬಲಿಯಾಗುತ್ತಿರುವುದು ದುರಂತದ ವಿಚಾರ.

ಸರ್ಕಾರಗಳ ತಪ್ಪು ನಡೆಯಿಂದಾಗಿ ಅಮಾಯಕ ಜನರು ಸಾವಿಗೀಡಾಗುತ್ತಿರುವ ಪರಿಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಸಾವಿನ ರಹ ದಾರಿ ಅಭಿಯಾನವನ್ನು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ರವರ ನೇತೃತ್ವದಲ್ಲಿ ಕೈಗೆತ್ತಿಕೊಂಡಿದೆ. ಈ ಮೂಲಕ ಅಮಾಯಕ ಪ್ರಯಾಣಿಕರ ಪ್ರಾಣಗಳನ್ನು ಉಳಿಸಲು ಈ ಅಭಿಯಾನದ ಮೂಲಕ ಜನಜಾಗೃತಿಯನ್ನು ಮೂಡಿಸಲು ನಿರ್ಧರಿಸಲಾಗಿದೆ.
ದಿನಾಂಕ : 30-6-2023
ಶುಕ್ರವಾರ
ಸಮಯ : ಮಧ್ಯಾಹ್ನ 12 ಗಂಟೆಗೆ ಸರಿಯಾಗಿ
ಸ್ಥಳ : ಕಣಿ ಮಣಿಕೆ ಟೋಲ್ ಹತ್ತಿರ,ಮೈಸೂರು ರಸ್ತೆ.