ವಾರ್ತಾಜಾಲ ವತಿಯಿಂದ ಅದ್ದೂರಿ ಪತ್ರಿಕಾ ದಿನಾಚರಣೆ

ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಹೊರಹೊಮ್ಮಿದ ಮಂಗಳೂರು ಸಮಾಚಾರದ ಮೊದಲ ಸಂಚಿಕೆ ಬಿಡುಗಡೆಗೊಂಡ ದಿನದ ಸ್ಮರಣಾರ್ಥ ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ.

1843ರ ಜುಲೈ 1ರಂದು ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಸಂವಿಧಾನದ ನಾಲ್ಕನೇ ರಂಗವಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ. 

‘ಮಂಗಳೂರು ಸಮಾಚಾರ’ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ.ಇಂದು ಪತ್ರಿಕಾರಂಗ ಬೃಹದಾಕಾರವಾಗಿ ನಡೆದು ಬಂದಿದ್ದರೂ ಡಿಜಿಟಲ್ ಮಾಧ್ಯಮಗಳ ಪ್ರಭಾವದ ಮಧ್ಯೆ ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ. ಪತ್ರಿಕಾ ದಿನಾಚರಣೆಯ ದಿನದಲ್ಲಾದರೂ ಇವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು. 

ಸರ್ಕಾರದ, ರಾಜಕೀಯ ನಾಯಕರು, ಪ್ರಭಾವಿಗಳ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಮಾಧ್ಯಮಗಳು, ಪತ್ರಿಕೆ ಕಾರ್ಯನಿರ್ವಹಿಸುವಂತಾಗಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ. ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ, ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡವರಿಗೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ವಾರ್ತಾಜಾಲ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಎಂಬ ಮಾಧ್ಯಮ ಸಂಸ್ಥೆಯಿಂದ ಪತ್ರಿಕಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಮಲ್ಲೇಶ್ವರಂ ನ, ಸಂಪಿಗೆ ರಸ್ತೆಯ 14ನೇ ಕ್ರಾಸ್ ನಲ್ಲಿರುವ ಸೇವಾ ಸದನದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

ಪಾತಾಜಾಲ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಎಂಬ ಮಾಧ್ಯಮ ಸಂಸ್ಥೆಯು ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿದ್ದು ರಾಜ್ಯಾದ್ಯಂತ ತನ್ನದೇ ಆದ ಓದುಗರ ಬಳಗವನ ಹೊಂದಿದ್ದು ಸುಮಾರು 14 ವರ್ಷಗಳಿಂದ ಮುದ್ರಣ ಮಾಧ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿಕೊಂಡು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಲೋಕಕ್ಕೆ ಪಾದರ್ಪಣೆ ಮಾಡಿದ್ದು ಅದರಲ್ಲೂ ಕೂಡ ತನ್ನದೇ ಆದ ಚಾಪನ್ನು ಮೂಡಿಸಿಕೊಂಡು ಮುನ್ನುಗುತ್ತಿದೆ. ಇಂತಹ ಸಂಸ್ಥೆಯಿಂದ ಈ ದಿನ _ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೂ, ಬೆಂಗಳೂರಿನಲ್ಲಿ ಮಲ್ಲೇಶ್ವರಂನ ಸಂಪಿಗೆ ರೋಡ್ ನ 14ನೇ ಕ್ರಾಸ್ ನಲ್ಲಿರುವ ಸೇವಾ ಸದನದಲ್ಲಿ ಪತ್ರಿಕಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ, ಅಚ್ಚುಕಟ್ಟಾಗಿ, ನಯಬದ್ಧವಾಗಿ ಆಚರಿಸಲಾಯಿತು. ಪಾತಾಜಾಲ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ನ ಮಾಲೀಕರು ಹಾಗೂ ಸಂಪಾದಕರಾದ ಬಿಕೆ ಪ್ರಸನ್ನ ಮತ್ತು ಅವರ ಪತ್ರಿಕಾ ಮಿತ್ರರ ಬಳಗದಿಂದ ಈ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಆಚರಿಸಲಾಯಿತು.

ಇಂದಿನ ದಿನ ಇಂದಿನ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ
ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರಂ ಕ್ಷೇತ್ರದ ಹಾಲಿ ಶಾಸಕರು ಆದಂತಹ ಅಶ್ವತ್ ನಾರಾಯಣ್ ರವರು; ಹಿರಿಯ ಪತ್ರಕರ್ತರು, ಸಂಪಾದಕರು ಹಾಗೂ ಸಲಹೆಗಾರರು ಆದಂತಹ ವೆಂಕಟ್ ನಾರಾಯಣರವರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ರವರು, ಹಂಸಲೇಖ ಪತ್ರಿಕೆಯ ಸಂಪಾದಕರು ಆದ ರಾಮಾಚಾರ್ ರವರು, ವಿಜಯಕುಮಾರ್ ರವರು __ ಮತ್ತಿತರರು ಭಾಗವಹಿಸಿದ್ದು ವಿಶೇಷವಾಗಿತ್ತು.

ಮುಖ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶದಲ್ಲಿ ಮೊದಲು ಉದಯವಾದ ಬೆಂಗಾಲಿ ಗೆಜೆಟ್ ಪತ್ರಿಕೆಯ ವಿಚಾರವನ್ನು ಮೆಲುಕು ಹಾಕುತ್ತಾ, ಅದೇ ರೀತಿಯಾಗಿ ಕರ್ನಾಟಕದಲ್ಲಿ ಪ್ರಪ್ರಥಮ ಕನ್ನಡ ಪತ್ರಿಕೆಯಾದ ಮಂಗಳೂರು ಸಮಾಚಾರದ ಉದಯದ ವಿಚಾರವನ್ನು ನೆನಪಿಸುತ್ತ, ಪತ್ರಿಕಾ ಸ್ವಾತಂತ್ರ್ಯದ ವಿಚಾರವನ್ನು ಮನವರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರವರಿಗೆ ಗೌರವಿಸಿ ಸನ್ಮಾನಿಸಲಾಯಿತು ಅಲ್ಲದೆ ಪತ್ರಿಕಾ ರಂಗದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿದ್ದಲ್ಲದೆ, ಹಲವಾರು ಪತ್ರಿಕೆಯ ಪತ್ರಕರ್ತರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು, ಅದೇ ರೀತಿಯಾಗಿ ಪತ್ರಿಕೆ ವಿತರಣೆ ಮಾಡುವ ವಿತರಕರನ್ನು ಗುರುತಿಸಿ ಸನ್ಮಾನಿಸಿದ್ದಲ್ಲದೆ, ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ತಮ್ಮದೇ ಆದನ ಛಾಪನ್ನು ಮೂಡಿಸಿಕೊಂಡು ತಮ್ಮ ಪತ್ರಿಕಾ ಧರ್ಮದ ಕರ್ತವ್ಯವನ್ನು ನಿಭಾಯಿಸುತ್ತಿರುವವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು. ಈ ಪತ್ರಿಕಾ ದಿನಾಚರಣೆಯ ಮೂಲಕ ಪತ್ರಕರ್ತರಿಗೆ ಮತ್ತಷ್ಟು ಧೈರ್ಯ ತುಂಬಿದಂತಾಯಿತು ಎಂಬುದು ಚಿಂತಕರ ಅಭಿನುಡಿ. ಇದೇ ರೀತಿಯಾಗಿ ವಾರ್ತಾಜಾಲ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥೆಯು ಪ್ರತಿ ವರ್ಷವೂ ಪತ್ರಕರ್ತರಿಗಾಗಿ ಇಂತಹ ಉತ್ತಮವಾದ, ಧೈರ್ಯ ತುಂಬುವ, ಸ್ಪೂರ್ತಿದಾಯಕವಾದ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಾ ಪತ್ರಕರ್ತರಿಗೆ ನೈತಿಕ ಬೆಂಬಲ ನೀಡಲಿ, ಉತ್ತಮವಾದ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಿ ಸ್ಪೂರ್ತಿದಾಯಕವಾಗಲಿ ಎಂಬುದು ಪತ್ರಕರ್ತರ ಆಶಯವಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತರಿಗೂ, ಸನ್ಮಾನಿತರಿಗೂ, ವಾರ್ತಾಜಾಲ ಮೀಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟ್ ವತಿಯಿಂದ ಹೃದಯಪೂರ್ವಕ ನಮನಗಳು.

Leave a Reply

Your email address will not be published. Required fields are marked *