ಔಷದವಿಲ್ಲದ ಆರೋಗ್ಯಕರ ಜೀವನ ನಡೆಸುವ ಕುರಿತು ಕಾರ್ಯಕ್ರಮ

ಬಿಬಿಎಂಪಿ ಕೇಂದ್ರ ಕಛೇರಿ, ನೌಕರರ ಭವನ ಸಭಾಂಗಣದಲ್ಲಿ ಬಿಬಿಎಂಪಿ ನಿವೃತ್ತ ನೌಕರರ ಸಂಘದ ವತಿಯಿಂದ ಔಷದವಿಲ್ಲದ ಆರೋಗ್ಯಜೀವನ ತಿಳುವಳಿಕೆ ಕಾರ್ಯಕ್ರಮ ಕರ್ನಾಟಕ ಟ್ರಡಿಷನಲ್ ಅಕ್ಯುಪಂಕ್ಚರಿಸ್ಟ್ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಿಬಿಎಂಪಿ ನಿವೃತ್ತ ನೌಕರರ ಸಂಘದ ಅದ್ಯಕ್ಷರಾದ ವೈ.ಎ.ಶಿವಪ್ರಸಾದ್, ಉಪಾಧ್ಯಕ್ಷರಾದ ಚ.ನಾಗರಾಜ್, ಕಾರ್ಯದರ್ಶಿ ತರಿಕೆರೆ ಗುರುಮೂರ್ತಿ, ಪದಾಧಿಕಾರಿಗಳಾದ ಬಿ.ಆರ್.ಶಿವಕುಮಾರ್, ವಿ.ನಂಜುಂಡಸ್ವಾಮಿ ಮತ್ತು ಅಕ್ಯುಪಂಕ್ಚರಿಸ್ಟ್ ಸಂಸ್ಥೆಯ ಆನಂದ್ ರವರು ಭಾಗವಹಿಸಿದ್ದರು.

ನಿವೃತ್ತ ನಂತರ ಮನೆಯಲ್ಲಿ ಕೂರದೇ ಸದಾ ಕಾರ್ಯಚಟುವಟಿಕೆಯಿಂದ ಇದ್ದರೆ ಮಾನಸಿಕ,ದೃಹಿಕವಾಗಿ ನೆಮ್ಮದ್ದಿಯಿಂದ ಜೀವನ ಸಾಗಿಸಬಹುದು.

60ವರ್ಷದ ನಂತರ ಹಿರಿಯರು ಮಕ್ಕಂತೆ ಆಗುತ್ತಾರೆ, ಆರಳು ಮರುಳು ಅಲ್ಲ, ಮರಳಿ ಅರಳುವ ಸಮಯವಾಗಿದೆ

ನಿವೃತ್ತ ನೌಕರರಿಗೆ ಸಕಾಲಕ್ಕೆ ಪಿಂಚಣಿ ಸೌಲಭ್ಯ, ಉಚಿತ ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿವೃತ್ತ ನೌಕರರಿಗೆ ಪ್ರವಾಸ ಕಾರ್ಯಕ್ರಮ ಹಾಗೂ ಆರೋಗ್ಯವಂತ ಜೀವನ ಸಾಗಿಸಲು ನಿವೃತ್ತ ನೌಕರರ ಸಂಘ ಸಹಾಯ, ಸಹಕಾರ ನೀಡುತ್ತಾ ಬಂದಿದೆ.

ವಯಸ್ಸು ದೇಹಕ್ಕೆ ಹೊರತು, ಮನಸ್ಸಿಗಲ್ಲ, ಮನಸ್ಸು ಸಂತೋಷವಾಗಿ ಇದ್ದಾರೆ ಆರೋಗ್ಯವಂತರಾಗಿ ಬಾಳಬಹುದು ಎಂಬುದು ನಿವೃತ್ತ ನೌಕರರ ಸಂಘ ಆಶಯವಾಗಿದೆ.

ನಿವೃತ್ತ ನೌಕರರ ಹಿತಾರಕ್ಷಣೆಗಾಗಿ ಬಿಬಿಎಂಪಿ ನಿವೃತ್ತ ನೌಕರರ ಸಂಘ ಶ್ರಮಿಸುತ್ತಿದೆ.

Leave a Reply

Your email address will not be published. Required fields are marked *