ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಮೂರು ವರ್ಷದ ಅವಧಿ ಸುದೀರ್ಘವಾಯಿತು: ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸಲು‌ ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ವಿಧೇಯಕಗಳ ಮೇಲಿನ ಪರ್ಯಾಲೋಚನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕು ಮತ್ತು ಸೇವೆ ಇಡಿ ರಾಷ್ಟ್ರದಲ್ಲಿ ಏಕ ರೂಪ ತೆರಿಗೆ ಇರಬೇಕೆಂದು 2017 ರಲ್ಲಿ ಸಂವಿಧಾ‌ನ ತಿದ್ದುಪಡಿ ಮಾಡಲಾಯಿತು. ಕೆಲವು ರಾಜ್ಯಗಳು ಉತ್ಪಾದನಾ ರಾಜ್ಯಗಳಾಗಿವೆ. ಕೆಲವು ರಾಜ್ಯಗಳು ಬಳಕೆ ರಾಜ್ಯಗಳಾಗಿವೆ.
ಹಲವಾರು ರಾಜ್ಯಗಳ ಸಲಹೆ ಪಡೆದು ಜಿಎಸ್ ಟಿಯನ್ನು ಬದಲಾವಣೆ ಮಾಡುತ್ತ ಬಂದಿದ್ದೇವೆ. ಜಿಎಸ್ ಟಿ ರೆಜಿಸ್ಟ್ರೇಷನ್ ಮಾಡುವುದೇ ಬಹಳ ಕಷ್ಟವಾಗುತ್ತಿತ್ತು ಅದನ್ನು ಸರಳಿಕರಣ ಮಾಡಲು ತಿದ್ದುಪಡಿ ತಂದಿರುವುದು ಸ್ವಾಗತಾರ್ಹ ಎಂದರು.
ರಿಟರ್ನ್ಸ್ ಫೈಲ್ ಮಾಡುವಾಗ ಸರ್ವರ್ ಡೌನ್ ಆಗಿ ಸಮಸ್ಯೆಯಾಗುತ್ತಿತ್ತು. ಕರ್ನಾಟಕ ಉತ್ಪಾದನಾ ರಾಜ್ಯ ಇಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾದಷ್ಟು ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಯಾರಿಗೆ ಜಿಎಸ್ ಟಿ ಬಗ್ಗೆ‌ ಮಾಹಿತಿ ಇದೆ ಅವರು ಜಿಎಸ್ ಟಿ ನೋಂದಣಿ ಮಾಡುತ್ತಾರೆ. ಬಹುತೇಕ ವ್ಯವಹಾರಗಳು ಹಣಕಾಸು ಚಲಾವಣೆಯ ಮೂಲಕ ಆಗುತ್ತವೆ. ಬಹಳಷ್ಟು ವ್ಯವಹಾರ ಅಧಿಕೃತವಾಗಿಯೇ ಆಗುವುದಿಲ್ಲ. ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ ಟಿ ಯಿಂದ ಹೊರಗಿಡಲಾಗಿದೆ. ಆದರೆ, ಅವರನ್ನು ರೆಜಿಸ್ಟ್ರೆಶನ್ ನಿಂದ ಹೊರಗಿಡುವುದು ಸರಿಯಲ್ಲ ಹಾಗೂ ರಿಟರ್ನ್ಸ್ ಸಲ್ಲಿಸಲು
ಮೂರು ವರ್ಷ ಜಿಎಸ್ ಟಿ ಒಮ್ಮೆಲೆ‌ ಕಟ್ಟಲು ಅವಕಾಶ ಕಲ್ಪಿಸಿರುವುದು ಹೆಚ್ಚಿನ ಸಮಯ ನೀಡಿದಂತಾಗುತ್ತದೆ. ಅದನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದರು.
ತೆರಿಗೆ ವಂಚನೆ ಮಾಡುವ ಪ್ರಕರಣಗಳು ಕರ್ನಾಟಕದಲ್ಲಿ ಸಾಕ್ಷಷ್ಡಿವೆ. ಅದನ್ನು ನಿಯಂತ್ರಿಸಲು ಕಾನೂನುನಾತ್ಮಕ ಕ್ರಮದ ಬಗ್ಗೆ ಪ್ರಸ್ತಾಪ ಇಲ್ಲ. ಮೂರು ವರ್ಷಗಳವರೆಗೆ ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳುವುದು ಕಷ್ಟ. ಮೂರು ವರ್ಷ ಸುದೀರ್ಘ ಅವಧಿಯಾಯಿತು. ಈ ಬಗ್ಗೆ‌ ಪರಿಶೀಲಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಮಾದರಿಯಲ್ಲಿ ಅಪಿಕಿಯೇಟ್ ಟ್ರಿಬ್ಯುನಲ್ ಮಾಡಿರುವುದು ಸರಿ ಇದೆ. ಈ ಕಾರ್ಮರ್ಸ್ ಗಳ ಮೇಲೆ ಗಮನ ಇಡುವ ಅಗತ್ಯವಿದೆ. ಇ ಕಾಮರ್ಸ್ ಕೂಡ ಸಮಸ್ಯೆ ಇದೆ.‌ ಇ ಕಾಮರ್ಸ್ ಕಚೇರಿ ನಗರದಲ್ಲಿ ಇರುತ್ತದೆ. ಅದರ ಕಾರ್ಯ ಚಟುವಟಿಕೆಗಳು ಬೇರೆ ಬೇರೆ ಕಡೆ ಇರುತ್ತದೆ. ನಮ್ಮ ರಾಜ್ಯದ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅಡಿಕೆ ಉತ್ತರ ಭಾರತದ ರಾಜ್ಯಗಳಿಗೆ ಅಡಿಕೆ ದೊಡ್ಡ ಪ್ರಮಾಣದಲ್ಲೇ ಹೋಗುತ್ತಿದೆ. ನೋಂದಣಿ ಇಲ್ಲದೆ ವ್ಯವಹಾರ ನಡೆಸಿದರೆ ದೊಡ್ಡ ಸಮಸ್ಯೆಯಾಗುತ್ತದೆ. ದೊಡ್ಡ ಡೀಲರ್ಸ್ ಗಳು ಸಣ್ಣ ವ್ಯವಹಾರಸ್ಥರನ್ನು ಇಟ್ಟುಕೊಂಡೇ ವ್ಯವಹಾರ ನಡೆಸುತ್ತಾರೆ ಈ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆ ಬರಬೇಕಾದರೆ ಈ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆ ತರುವ ಅಗತ್ಯ ಇದೆ ಎಂದು ಹೇಳಿದರು.

Leave a Reply

Your email address will not be published. Required fields are marked *