ಆ. 15 ರಂದು ಕಾರ್ಗಿಲ್ ನಲ್ಲಿ ಮೋಹನ್ ದಾನಪ್ಪರಿಂದ ಜಾಗೃತಿ: ಮ್ಯಾರಥಾನ್, ಮಾಜಿ ಸಿಎಂ ಬೊಮ್ಮಾಯಿ ಮೆಚ್ಚುಗೆ!
ಬೆಂಗಳೂರು: ಜು 22, “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟಕ್ಕೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿರವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು!
ಕಳೆದ ವರ್ಷ ದೆಹಲಿಯಲ್ಲಿ ಮತದಾನ ಜಾಗೃತಿ ಬಗ್ಗೆ ಮೋಹನ್ ಕುಮಾರ್ ದಾನಪ್ಪನವರು ನಡೆಸಿದ್ದ ಮ್ಯಾರಥಾನ್ ಓಟವನ್ನ ಅಭಿನಂದಿಸಿ ಭಾರತ ದಾಖಲೆ ಪ್ರಮಾಣಪತ್ರವನ್ನ ನೀಡಿ ಬೊಮ್ಮಾಯಿರವರು ಪ್ರಶಂಸಿದ್ದರು!
