ಬೆಂಗಳೂರು. ಇತ್ತೀಚೆಗಷ್ಟೇ ಉಡುಪಿಯ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಅದೇ ಹಾಸ್ಟೆಲ್ ನಲ್ಲಿರುವ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಹಾಗೂ ವೀಡಿಯೋಗಳನ್ನ ತೆಗೆದು ಮುಸ್ಲಿಂ ಹುಡುಗರಿಗೆ ಕಳುಹಿಸಿರುವ ವೀಡಿಯೋಗಳೀಗ ವೈರಲ್ ಆಗಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಹಾಗೂ ಅತ್ಯಂತ ನಾಚಿಕೆಗೇಡಿನ ಸಂಗತಿಯೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಕೆ ಜಿ ನಾಗಲಕ್ಷ್ಮಿಬಾಯಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಇಂತಹ ದುರ್ಘಟನೆಗಳು ನಡೆಯುತ್ತಿರುವುದು ಈ ಸಮಾಜದ ದೌರ್ಭಾಗ್ಯವೆಂದೂ ಉಡುಪಿ
ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿನಿಯರು ಫೋಟೋಗಳನ್ನು ತೆಗೆದಿದ್ದರ ಜೊತೆಗೆ ವಿದ್ಯಾರ್ಥಿ ನಿಲಯದ ಸ್ನಾನದ ಕೊಠಡಿಯಲ್ಲಿ ತಮ್ಮ ಸಹ ಪಾಠಿ ಹಿಂದೂ ವಿದ್ಯಾರ್ಥಿನಿಯರು ಸ್ನಾನ ಮಾಡುವ ಸಮಯದಲ್ಲಿ ಅವರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾಗಳಿದೆ ಹರಿಟ್ಟಿರುವುದನ್ನ ನಾನು ವೈಯತ್ತಿಕವಾಗಿ ತೀವ್ರವಾಗಿ ಖಂಡಿಸುತ್ತೇನೆಲ್ಲದೇ ಸರ್ಕಾರವೂ ಸಹ ಇದನ್ನ ಗಂಭೀರ ಪ್ರಕರಣವೆಂದು ಪರಿಗಣಿಸಲು ಒತ್ತಾಯಿಸುತ್ತೇನೆ.
ಅಲ್ಲದೇ ಈ ಪ್ರಕರಣವು ಮುಂದಿನ ದಿನಗಳಲ್ಲಿ ಒಂದಷ್ಟು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿರುವುದರಿಂದ ಈಗಲೇ ಇದರ ಗಂಭೀರತೆ ಅರಿತು ಆ ಹೆಣ್ಣು ಮಕ್ಕಳು ಈಗಾಗಲೇ ತೆಗೆದಿರುವ ಸದರೀ ವೀಡಿಯೋಗಳು ಅವರು ಯಾವ ಯಾವ ಹುಡುಗರಿಗೆ ಕಳುಹಿಸಿದ್ದಾರೆ ಜೊತೆಗೆ ಆ ಹುಡುಗರು ಅದನ್ನ ಮತ್ತಿನ್ಯಾರಿಗೆ ಕಳಿಸಿದ್ದಾರೆಂಬುದನ್ನ ಕೂಡಲೇ ತನಿಖೆ ನಡೆಸುವ ಮೂಲಕ ಪತ್ತೆಹಚ್ಚಬೇಕಿದೆ ಇಲ್ಲದಿದ್ದರೆ ಇದು ಮತ್ತೊಂದಷ್ಟು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆಯೆಂದಿದ್ದಾರೆˌ
ಅಲ್ಲದೇ ಈಗಾಗಲೇ ಕಾಲೇಜು ಪ್ರಾಂಶುಪಾಲರು ಕೃತ್ಯ ಎಸಗಿದ ಮೂರು ಜನ ಮುಸ್ಲಿಂ ಹುಡುಗಿಯರನ್ನು ಕೇವಲ ಕಾಲೇಜಿನಿಂದ ಅಮಾನತ್ತು ಮಾಡಿ ಕೈತೊಳೆದುಕೊಂಡಿದ್ದಾರೆನ್ನುವುದು ಮೇಲ್ನೋಟಕ್ಕೆ ಅವರಿಗೆ ಸರಿ ಎನಿಸಿದರೂ ಇದೊಂದು ಪ್ರಕರಣವನ್ನು ಹಳ್ಳಹಿಡಿಸಲು ನಡೆಸುವ ಷಡ್ಯಂತ್ರವೆಂದು ಎಂತಹವರಿಗೂ ತಿಳಿಯುತ್ತದೆ.
ಇದರ ಜೊತೆಗೆ ಈ ಈ ವೀಡಿಯೋಗಳು ವೈರಲ್ ಆಗಿ ಈಗಾಗಲೇ ಮೂರು – ನಾಲ್ಕು ದಿನಗಳಾಗಿದ್ದರೂ ಈ ಬಗ್ಗೆ ಕರ್ನಾಟಕ ರಾಜ್ಯದ ಯಾವೊಬ್ಬರೂ ಇದರ ಬಗ್ಗೆ ಧ್ವನಿ ಎತ್ತದೇ ಇರುವುದು ಈ ರಾಜ್ಯದ ದೌರ್ಭಾಗ್ಯ ಸಂಗತಿ. ಈವರೆಗೂ ಯಾರೇ ಮಹಿಳಾ ಮಂತ್ರಿಗಳಾಗಲಿ, ಸರ್ಕಾರದ ಮಂತ್ರಿಗಳಾಗಲಿˌ ಸಂಘ ಸಂಸ್ಥೆಗಳಾಗಲಿ, ಯಾರೂ ಗಂಭೀರವಾಗಿ ಪರಿಗಣಿಸದೇ ಇರುವುದು ಹಾಗೂ ಈ ಕುರಿತು ಪ್ರತಿಕ್ರಿಯಿಸದೇ ಇರುವುದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.
ಅಲ್ಲದೆ ಕಾಲೇಜಿನ ಆಡಳಿತ ಮಂಡಳಿಯೂ ಅವರನ್ನ ಕಾಲೇಜಿನಿಂದ ಅಮಾನತು ಮಾಡಿದ ಕೂಡಲೇ ಎಲ್ಲವೂ ಸರಿ ಹೋಯಿತು ಎಂದು ಭಾವಿಸಿಕೊಳ್ಳುವುದು ತಪ್ಪು. ಜೊತೆಗೆ ಈ ಮೂವರು ಹುಡುಗಿಯರು ತಮಾಷೆಗೆಂದು ಮಾಡಿರುವ ವೀಡಿಯೋ ಎಂದು ಸಮಜಾಯಿಷಿ ನೀಡಿದರೂ ಅದನ್ನ ಒಪ್ಪಿಕೊಳ್ಳಲಿಕ್ಕಾಗದು. ಇದನ್ನ ಈಗಾಗಲೇ ಹರಿಬಿಟ್ಟಿರುವುದರಿಂದ ಉದ್ದೇಶ ಪೂರ್ವಕವಾಗಿ ಯಾರಿಗೋ ಮಾಡಿ ಕಳಿರುವ ಕೈತ್ಯವಾಗಿದ್ದು ಈ ಕೃತ್ಯದ ಹಿಂದೆ ದೊಡ್ಡ ಷಡ್ಯಂತ್ರವೇ ಇರುವ ಸಾಧ್ಯತೆಯನ್ನುಯಿವುದೇ ಕಾರಣಕ್ಕೂ ತಳ್ಳಿಹಾಕುವಂತಿಲ್ಲ. ಜೊತೆಗೆ ಹಿಂದೂ ಹುಡುಗಿಯರ ನಗ್ನ ದೃಶ್ಯಗಳನ್ನು ವೈರಲ್ ಮಾಡಿರುವುದರಿಂದ ಆ ಹುಡುಗಿಯರು ಅವಮಾನ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾದರೆ? ಅದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು ಎಂಬ ಪ್ರಶ್ನೆ ಗೆ ಈಗಲೇ ಉತ್ತರ ಕಂಡುಕೊಳ್ಳಬೇಕೀದೆ.
ಹಾಗೊಂದು ವೇಳೆ ಹಿಂದೂ ಹುಡುಗಿಯರು ಮುಸ್ಲಿಂ ಹುಡುಗಿಯರಿಗೆ ಈ ರೀತಿ ಮಾಡಿ ಅದು ವೈರಲ್ ಆಗಿದಿದ್ದರೆ ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಕ್ರಾಂತಿ ಆಗುತ್ತಿತ್ತು. ಇದೆಂತಹ ವಿಪರ್ಯಾಸದ ಸಂಗತಿ? ಮತ್ತೂ ದೌರ್ಭಾಗ್ಯದ ಸಂಗತಿಯೆಂದರೆ ಮಹಿಳೆಯರೇ ಮಹಿಳೆಯರ ಅಶ್ಲೀಲಗಳನ್ನು ವೀಡಿಯೋ ಚಿತ್ರೀಕರಿಸಿವೈರಲ್ ಮಾಡಿರುವುದು. ಇದು ಇತ್ತೀಚಿನ ಬೆಳವಣಿಗೆಗಳಿಗೆ ಸಾಕ್ಷಿಯಾದಂತಿದೆ.
ಆದ್ದರಿಂದ ಮಾನ್ಯ ಸರ್ಕಾರವು ಈ ಘಟನೆಯನ್ನ ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ. ಕೃತ್ಯ ಎಸಗಿದ ಆ ಮೂರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸುವುದಷ್ಟೇ ಸಾಲದು. ಅಪರಾಧಿತ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ನಡೆಸಬೇಕಿದೆ. ಇದು ಸರ್ಕಾರದ ಆದ್ಯಕರ್ತವ್ಯವೂ ಹೌದು.
ಅಲ್ಲದೇ ರಾಜ್ಯ ಸರ್ಕಾರವು ಈ ಬಾರಿ ಗೃಹಲಕ್ಷ್ಮೀ ಯೋಜನೆ, ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಮೊದಲಾದ ಉತ್ತಮ ಯೋಜನೆಗಳನ್ನು ನೀಡಿ ಮಹಿಳೆಯರಿಗೆ ಒಂದಷ್ಟು ಭಾಗ್ಯಗಳನ್ನ ನೀಡಿದೆ. ಆದ್ದರಿಂದ ಇಂತಹ ಘಟನೆಗಳು ನಡೆದಾಗ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದಾಗ ಮಾತ್ರ ಸರ್ಕಾರಕ್ಕಿರುವ ಮಹಿಳಾ ಪರವಾದ ಬದ್ಧತೆ ಮತ್ತಷ್ಟು ಹೆಚ್ಚುತ್ತದೆಯಲ್ಲದೇ ಸರ್ಕಾರವು ನೀಡುತ್ತಿರುವ ಮಹಿಳಾ ಪರವಾದ ಯೋಜನೆಗ ಳು ಸಾರ್ಥಕಗೊಳ್ಳುತ್ತವೆ ಎಂದಿದ್ದಾರೆ.