ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ: ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಮತ್ತು ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ
ಬೆಂಗಳೂರು: ಶ್ರೀ ಬಸವೇಶ್ವರ ಸುಜ್ಞಾನ ಮಂಟಪ ವಿಜಯನಗರದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ(ರಿ)ನವದೆಹಲಿ ವತಿಯಿಂದ 132ನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಮತ್ತು ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಹಯೋಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಲಾಗಿತ್ತು.

ಮಾಜಿ ಸಚಿವರು, ಶಾಸಕರಾದ ಎಂ.ಕೃಷ್ಣಪ್ಪರವರು, ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯರವರು, ಮಹಾಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, IFWj ಒಕ್ಕೂಟದ ಹೇಮಂತ್ ತಿವಾರಿ ಕಾರ್ಯದರ್ಶಿ ಆಸಾದುಲ್ಲಾ ಬೇಗ್, ಸಿದ್ದಾರ್ಥ, ನರಸಿಂಹನ್ ಮತ್ತು ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕರಾದ ಎಚ್.ಬಿ.ಮದನಗೌಡರು, kuwjಉಪಾಧ್ಯಕ್ಷರಾದ ಭವಾನಿಸಿಂಗ್, ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ್, ಸಂಘಟಕರಾದ ಹುಲಿ ಅಮರ್ ನಾಥ್ ರವರು ದೀಪ ಬೆಳಗಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದರು.
ಶಾಸಕರಾದ ಎಂ.ಕೃಷ್ಣಪ್ಪರವರು ಮಾತನಾಡಿ ಪತ್ರಕರ್ತರ ಜೊತೆಯಲ್ಲಿ ವಿಶ್ವಾಸದಲ್ಲಿ ನಾನು ಇದ್ದೀನಿ, ಎಲ್ಲ ಮಾಧ್ಯಮದವರು ನನ್ನ ಸ್ನೇಹಿತರು.
ಮಾನವೀಯತೆ ಮುಖ್ಯ, ಜನರ ನಡುವೆ ಇದ್ದು ಕೆಲಸ ಮಾಡಬೇಕು .ನಮಗೆ ಪ್ರಚಾರ ಬೇಡ ಅದರು ನಮ್ಮನ್ನ ಗುರುತಿಸಿ ಪತ್ರಕರ್ತರು ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ಬರುತ್ತಿದ್ದರು ಅದರೆ ಇಂದಿನ ರಾಜಕೀಯ ಪರಿಸ್ಥಿತಿ ಬೇರೆಯೆ ಇದೆ.
ಸೋಷಿಯಲ್ ಮಿಡಿಯ ಅತ್ಯಂತ ಪ್ರಭಾವಶಾಲಿಯಾಗಿದೆ. ಒಂದು ಪಕ್ಷವನ್ನು ಅಧಿಕಾರಕ್ಕೆ ತರಬಹುದು ಅಥವಾ ಸರ್ಕಾರವನ್ನು ಬೀಳಿಸಲು ಮಾಧ್ಯಮಗಳ ಪ್ರಭಾವವಿದೆ. ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯರವರು ಮಾತನಾಡಿ ದೇಶದ ಪತ್ರಕರ್ತರು ನವದೆಹಲಿ ಸೇರಿ ಪತ್ರಕರ್ತರ ಮಸೂದೆ ತರಲು ಚರ್ಚೆ ಮಾಡಲಾಯಿತು. ಸುಪ್ರಿಂಕೋರ್ಟ್ ನಲ್ಲಿ ಇರುವ ಮೊಕದ್ದಮೆಗಳನ್ನು 6ತಿಂಗಳಲ್ಲಿ ಬಗೆಹರಿಸಬೇಕು.
ಇಂದು ಸುದ್ದಿಯ ವೇಗ ಹೆಚ್ಚಾಗಿದೆ, ಸುದ್ದಿ ಮಾಡಲು ತಲಪಿಸಲು ಪತ್ರಕರ್ತರು ಶ್ರಮವಹಿಸುತ್ತಿದ್ದಾರೆ. ಸೋಷಿಯಲ್ ಮಿಡಿಯ ವೇಗದಿಂದ ಪತ್ರಿಕೆಗಳು ಅತಂಕ ಎದುರಿಸುತ್ತಿದೆ. ಸುಳ್ಳು ಸುದ್ದಿ ಹರಡುವುದರಲ್ಲಿ ಸೋಷಿಯಲ್ ಮಿಡಿಯ ತಲ್ಲಿನವಾಗಿದೆ. ಕಾರ್ಯನಿರತ ಪತ್ರಕರ್ತರ ಮಸೂದೆಯಲ್ಲಿ ಪತ್ರಕರ್ತರ ಸಮಸ್ಯೆಗಳ ನಿವಾರಣೆ ಕ್ರಮ. ಪತ್ರಕರ್ತರಿಗೆ ಪಿಂಚಣಿ,ವಸತಿ ಸೌಲಭ್ಯ ಮತ್ತು ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಪತ್ರಕರ್ತರ ಹಿತಾಸಕ್ತಿ ಮತ್ತು ಸಂಘಟನೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಶಿವಾನಂದ ತಗಡೂರುರವರು ಮಾತನಾಡಿ ಪತ್ರಕರ್ತರ ನೋವು ನಲಿವುಗಳಿಗೆ , ಪರ ನಿಲ್ಲುವ ಮತ್ತು ಸರ್ಕಾರದ ಗಮನಸೆಳೆಯಲು ಡಿ.ವಿ.ಗುಂಡಪ್ಪರವರ ನೇತೃತ್ವದಲ್ಲಿ ಪತ್ರಕರ್ತರ ಸಂಘ ಚಾಲನೆ ನೀಡಲಾಯಿತು, ಮೈಸೂರು ಪತ್ರಕರ್ತರ ಸಂಘದ ಹೆಸರನ್ನ ಕರ್ನಾಟಕ ಪತ್ರಕರ್ತರ ಸಂಘ ಮರು ನಾಮಕರಣವನ್ನು ಖಾದ್ರಿ ಶಾಮಣ್ಣರವರು ಮಾಡಿದರು.
ಪತ್ರಕರ್ತರಿಗೆ ವೃತ್ತಿ ಧರ್ಮ ಮುಖ್ಯ.
ಪತ್ರಕರ್ತರ ಸಂಕಷ್ಟಗಳಿಗೆ ನೆರವು ನೀಡಲು ಮತ್ತು ಪತ್ರಕರ್ತರ ಹಿತಾಸಕ್ತಿಗಾಗಿ ಸಂಘಟನೆ ಮುಖ್ಯ. ರಾಜ್ಯದಲ್ಲಿ ಇರುವ ಟೋಲ್ ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶ ಅವಕಾಶ ನೀಡಬೇಕು. ಮದನಗೌಡರವರು ಮಾತನಾಡಿ ದೇಶದ ಅತಿ ಡೊಡ್ಡ ಪತ್ರಕರ್ತರ ಸಂಘಟನೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪತ್ರಕರ್ತರ ಸಮಸ್ಯೆಗಳು ಮತ್ತು ಪತ್ರಕರ್ತರ ಹಿತಾಸಕ್ತಿಗಾಗಿ ಸಂಘಟನೆ ಒತ್ತು ನೀಡಬೇಕು. ಪತ್ರಕತ್ರರು ಕಚ್ಚಾಟ ಮಾಡಲು ಒಟ್ಟಾಗಿ ಸೇರಿ ಸಂಘಟನೆ ಮಾಡೋಣ ಎಂದು ಹೇಳಿದರು.