ಆರ್ಯವೈಶ್ಯ ಅಭಿವೃದ್ಧಿ ನಿಗಮದಲ್ಲಿ ಶೇ. 100ರಷ್ಟು ಡಿ.ಬಿ.ಟಿ ಸಾಧನೆ: ಸಕಾಲದಲ್ಲಿ ಮರುಪಾವತಿ ಮಾಡಲು ವಿನಂತಿ – ಡಿ.ಎಸ್.ಅರುಣ್
2022-23ನೇ ಸಾಲಿನಲ್ಲಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಯಾದ ರೂ.15.00ಕೋಟಿ ಅನುದಾನದಲ್ಲಿ ಆಧಾರ್ ಆಧಾರಿತ ಪಾವತಿಯ (ಆಃಖಿ-ಆiಡಿeಛಿಣ beಟಿeಜಿiಛಿiಚಿಡಿಥಿ ಣಡಿಚಿಟಿsಜಿeಡಿ) ಮೂಲಕ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿಯಲ್ಲಿ 838 ಫಲಾನುಭವಿಗಳಿಗೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ 46 ವಿದ್ಯಾರ್ಥಿಗಳಿಗೆ ಸಾಲ/ಸಹಾಯಧನವನ್ನು ಬಿಡುಗಡೆ ಮಾಡಿ ಶೇ. 100ರಷ್ಟು ಪ್ರಗತಿಯನ್ನು ಸಾಧಿಸಿರುವುದು ಹೆಮ್ಮೆಯ ವಿಷಯವಾಗಿರುತ್ತದೆ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ನಿಗಮದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಿರುತ್ತೇನೆ. ಇದರಿಂದ ಸಕಾಲದಲ್ಲಿ ಎಲ್ಲಾ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಸಾಲ/ಸಹಾಯಧನ ಮಂಜೂರು ಮಾಡಲು ಸಾಧ್ಯವಾಗಿರುವುದು ನನಗೆ ಸಂತಸದ ವಿಷಯವಾಗಿರುತ್ತದೆ. ಡಿ.ಬಿ.ಟಿ ಕಡ್ಡಾಯವಾಗಿರುವುದರಿಂದ ಮುಂದಿನ ದಿನಗಳಲ್ಲೂ ಸಹ ಎಲ್ಲಾ ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಜೋಡಣೆ ಮಾಡಿರಬೇಕು ಹಾಗೂ ಖಾತೆಗಳನ್ನು ಚಾಲ್ತಿಯಲ್ಲಿಟ್ಟು ಕೊಂಡಿರಬೇಕೆಂದು ಅವರು ತಿಳಿಸಿದರು.
ಪ್ರಸ್ತುತ ನಿಗಮಕ್ಕೆ ರೂ.3.50 ಕೋಟಿ ಮರುಪಾವತಿ ಮೊತ್ತ ಸ್ವೀಕೃತಿಯಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಸಾಲ ಪಡೆದಂತಹ ಎಲ್ಲಾ ಫಲಾನುಭವಿಗಳು ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಅವರು ತಿಳಿಸಿದ್ದಾರೆ.
ನಿಗಮದ ಸಾಧನೆಗೆ ಪಾಲುದಾರರಾಗಿರುವಂತಹ ಎಲ್ಲಾ ವಿಭಾಗೀಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಗಮದ ಯೋಜನೆಗಳನ್ನು ತಂತ್ರಾಂಶದಲ್ಲಿ ಅಳವಡಿಸಿದ ಪೆÇ್ರೀಗ್ರಾಮ್ಸ್‍ಗಳಿಗೆ ಹಾಗೂ ಎಲ್ಲಾ ಹಂತಗಳಲ್ಲೂ ಜೊತೆಯಾಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ. ದೀಪಶ್ರೀ.ಕೆ ರವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಇನ್ನು ಮುಂದೆಯೂ ಸಹ ನಿಗಮವನ್ನು ಇದೇ ರೀತಿ ಅಭಿವೃದ್ಧಿಪಡಿಸಬೇಕೆಂದು ಅವರು ಹೇಳಿದ್ದಾರೆ.