ಗಾನೋತ್ಸವ-2023

ಬೆಂಗಳೂರು : ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜುಲೈ 30, ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಜಯನಗರ 4ನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ( ‘ವಾಯುಪಥ’, #4, 31ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560011) ನಲ್ಲಿ “ಗಾನೋತ್ಸವ-2023” ಶೀರ್ಷಿಕೆಯಲ್ಲಿ ಬಾಲಪ್ರತಿಭೆ ಮತ್ತು ಯುವ ಪ್ರತಿಭೆಗಳಿಂದ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದು, ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಡಿನ ಸಂಗೀತ ದಿಗ್ಗಜರುಗರಾದ ವಿ|| ಶೃಂಗೇರಿ ಹೆಚ್.ಎಸ್. ನಾಗರಾಜ್ ಮತ್ತು ವಿ|| ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿರುತ್ತಾರೆ.

ಈ ಸಂಗೀತ ಸಂಭ್ರಮದಲ್ಲಿ ಗಾಯನದ ಹೊಳೆ ಹರಿಸುವವರು : ಕುಮಾರಿಯರಾದ ಅನುಕೃಪ ರೌಡೂರ್, ಮನಸ್ವಿ ಜಿ. ಕಶ್ಯಪ್, ಸಂಜನಾ, ದೀಪ್ತಿ ಶ್ರೀನಿವಾಸನ್ ಮತ್ತು ಶ್ರೀಮತಿ ವಿದ್ಯಾ ಕಲ್ಕೋಡ್. ಇವರ ಗಾಯನಕ್ಕೆ ವಾದ್ಯ ಸಹಕಾರ ನೀಡುವ ಕಲಾವಿದರು- ಪಿಟೀಲು : ಕೃಷ್ಣ ಕಶ್ಯಪ್, ರಶ್ಮಿ ಆರ್., ಮೃದಂಗ : ಸರ್ವಜಿತ್, ಬಿ.ಎನ್. ಕಾರ್ತಿಕ್ ಪ್ರಣವ್, ಕೀಬೋರ್ಡ್ : ಅಮಿತ್ ಶರ್ಮಾ, ತಬಲಾ : ಮಧುಸೂದನ್ ಕೊಪ್ಪ, ಪ್ರಮೋದ್ ಗಬ್ಬೂರ್, ಗಿಟಾರ್ : ಅನಿರುದ್ಧ ಗಣೇಶ್, ಡ್ರಮ್ಸ್ : ಸೃಜನ್ ಕೊಡವೂರ್, ಮಂಜರಿ ಹೊಂಬಲಿ ಸಾಥ್ ನೀಡಲಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥರೂ ಹಾಗೂ ಗುರುಗಳೂ ಆದ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *