ಸಾಮ್ರಾಟ್ ಪೋಷಕರಾಗಿ ಶ್ರೀಶ್ರೀ ಸುಜಯನಿಧಿ ತೀರ್ಥರು

ಬೆಂಗಳೂರು : ಅಖಿಲ ಕರ್ನಾಟಕ ಮಧ್ವ ಮಹಾಸಭಾದ ಸಾಮ್ರಾಟ್ ಪೋಷಕರಾಗಿ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀಶ್ರೀ ಸುಜಯನಿಧಿ ತೀರ್ಥರು ಸೇರ್ಪಡೆಯಾದರು,


ಅವರು ಇಂದು ಸಂಘದ ಕಚೇರಿಗೆ ಸಿಬ್ಬಂದಿಯೊಂದಿಗೆ ಆಗಮಿಸಿದ ಅವರನ್ನು ಅಧ್ಯಕ್ಷ ಮುರಳೀಧರ ಮತ್ತು ತಂಡವರು ಆತ್ಮೀಯವಾಗಿ ಬರಮಾಡಿಕೊಂಡರು, ಸಂಘದ ಕಾರ್ಯಾಚಟುವಟಿಕೆ ಬಗ್ಗೆ ಶ್ರೀಗಳಿಗೆ ಸವಿಸ್ತಾರವಾಗಿ ತಿಳಿಸಲಾಯಿತು.
ಸ್ವತಃ ಶ್ರೀಸುಜಯನಿಧಿ ತೀರ್ಥರೇ ಅರ್ಜಿಯನ್ನು ತುಂಬಿ ಸಂಘದ ಸದಸ್ಯರಾದರು.
ನಂತರ ಶ್ರೀಗಳು ಮಾತನಾಡಿ ಜ್ಞಾನಸತ್ರದ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಶ್ರೀಮಠದ ವತಿಯಿಂದ ರಂಗವಿಠ್ಠಲ ಮಾಸ ಪತ್ರಿಕೆಯನ್ನು ಹೊರ ತರುತ್ತಿದ್ದು ಅಧಿಕ ಮಾಸದ ಅಂಗವಾಗಿ ಭಕ್ತರು ಅದರ ಚಂದಾದಾರರು ಆಗಿ ಇನ್ನಷ್ಟು ಜನರಿಗೆ ತಲುಪುವ ಕಾರ್ಯವನ್ನು ಮಾಡಿ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮುರಳೀಧರ, ಸಂಘಟನಾ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಖಜಾಂಚಿ ರಾಮಚಂದ್ರ, ಬಿಂದು ಮುರಳೀಧರ, ಮಂಜುನಾಥ್, ಶ್ರೀಮಠದ ಪ್ರಸನ್ನ ಹೆಬ್ಬನಿ, ರಾಕೇಶ್, ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.
ಶ್ರೀಗಳು ಎಲ್ಲರಿಗೂ ಫಲ ಮಂತ್ರಾಕ್ಷತೆ ನೀಡಿ ಆಶೀರ್ವಾದಿಸಿದರು.

Leave a Reply

Your email address will not be published. Required fields are marked *