ಕಾಶ್ಮೀರದ ಶೃಂಗೇರಿ ಶಾರದಾ ಯಾತ್ರಾ ಮಂದಿರಕ್ಕೆ ಸೇನೆಯ ಉನ್ನತ ಅಧಿಕಾರಿಗಳ ಭೇಟಿ
ಪಾಕ್ ಗಡಿಯಿಂದ ವಾರ್ತಾ ಜಾಲ ವರದಿ;
(ತೀತ್ವಾಲ್ ಶಾರದಾ ಮಂಜುನಾಥ ಶರ್ಮ. )
Loc,ತೀತ್ವಾಲ್ ಗ್ರಾಮ,
ಕಾಶ್ಮೀರ; ಜುಲೈ 30 *ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ 15 ಕಾರ್ಪ್ಸ್ ಕಮಾಂಡರ್
ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ರವರು ಶನಿವಾರ ತಮ್ಮ ಪತ್ನಿಯೊಂದಿಗೆ ಎಲ್ಒಸಿ ಯ ತೀತ್ವಾಲ್ ನ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.



ಇವರೊಂದಿಗೆ ಭಾರತೀಯ ಸೇನೆಯ ಬಿಎಸ್ಎಫ್ ನ ಕುಪ್ವಾರ ಜಿಲ್ಲೆಯ ಜಿಒಸಿ ಆಗಿರುವ ಗಿರೀಶ್ ಕಾಲಿಯಾ ಮತ್ತು ಅವರ ಪತ್ನಿ ಕೂಡ ಇದ್ದರು. ಶೃಂಗೇರಿ ಶಾರದಾ ಯಾತ್ರಾ ದೇವಸ್ಥಾನ ಸಮಿತಿಯ ಸದಸ್ಯ ಏಜಾಜ್ ಖಾನ್, ಎಸ್. ಜೋಗಿಂದರ್ ಸಿಂಗ್, ಹೃದಯಾನಂದ ಪೂಜಾರಿ ಸೇರಿದಂತೆ ದಕ್ಷಿಣ ಭಾರತದ ಯಾತ್ರಿಗಳು ಮತ್ತು ಸ್ಥಳೀಯರು ಅವರನ್ನು ಬರಮಾಡಿಕೊಂಡರು. ಶಾರದಾ ಸಂರಕ್ಷಣಾ ಸಮಿತಿಅಧ್ಯಕ್ಷ ರವೀಂದರ್ ಪಂಡಿತ ರವರು ಮಾತನಾಡಿ
ತೀತ್ವಾಲ್‌ನಲ್ಲಿ ಮಾರ್ಚ್ 22ರಂದು ಉದ್ಘಾಟನೆಗೊಂಡ ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಸೇನಾ ಜನರಲ್‌ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ವರ್ಷ ಜೂನ್ 14 ರಂದು ಅಧಿಕಾರ ವಹಿಸಿಕೊಂಡ ನಂತರ ಜನರಲ್ ರ ಮೊದಲ ಭೇಟಿ ಇದಾಗಿದೆ. ಈ ವರ್ಷ ಮಾರ್ಚ್ 22 ರಂದು ದೇಹಲಿಯಿಂದ ಶ್ರೀನಗರಕ್ಕೆ ಆಗಮಿಸಿ ಲೈವ್ ವಿಡಿಯೋ ಸ್ಟ್ರೀಮಿಂಗ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗೌರವಾನ್ವಿತ ರಾಜ್ಯಪಾಲ ಮನೋಜ್ ಸಿನ್ಹಾ, ರವರು ಉದ್ಘಾಟಿಸಿದ್ದು ಅಂದು ಅಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್, ಮತ್ತು ಶಾರದಾ ಉಳಿಸಿ ಸಮಿತಿಯ ಮುಖ್ಯಸ್ಥ ರವೀಂದರ್ ಪಂಡಿತ ಉಪಸ್ಥಿತಿಯಲ್ಲಿ ದೇವಾಲಯವನ್ನು ಉದ್ಘಾಟಿಸಲಾಗಿತ್ತು. ಈ ಶಾರದಾ ದೇವಾಲಯವನ್ನು ಉದ್ಘಾಟಿಸಿದ ದಿನದಿಂದ ದೇಶದ ವಿವಿಧ ಕಡೆಯಿಂದ ಯಾತ್ರಿಕರು ಮತ್ತು ಗಣ್ಯರು ಆಗಮಿಸುತ್ತಿದ್ದಾರೆ. ಸಮಿತಿ ವತಿಯಿಂದ ಶಾರದಾ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪಾಕ್ ಆಕ್ರಮಿತ ಕಾಶ್ಮೀರದ ಮೂಲ ಶಾರದಾ ಪೀಠಕ್ಕೆ ಹಿಂದಿನ ಕಾಲದಲ್ಲಿ ತೀರ್ಥಯಾತ್ರೆ ಹೋಗಲು ಇದು ಕೂಡ ಒಂದು ಸಾಂಪ್ರದಾಯಿಕ ಮಾರ್ಗವಾಗಿತ್ತು, ಹಿಂದಿನ ಯಾತ್ರಾ ಕೇಂದ್ರ ದುಷ್ಕರ್ಮಿಗಳ ದಾಳಿ ಮತ್ತು ದೇಶ ವಿಭಜನೆಯ ನಂತರ 1948 ರಲ್ಲಿ ಕೊನೆಯದಾಗಿ ಯಾತ್ರೆ Posts ಹೋಗಿತ್ತು.
ಕಾಶ್ಮೀರ ಕಣಿವೆಯ ಎರಡೂ ಕಡೆ ಹಿಂದೂ ಸನಾತನ ಅನೇಕ ಮಂದಿರಗಳು ಪಾಳು ಬಿದ್ದಿದ್ದು ಅವುಗಳ ಪುನರುತ್ಥಾನಕ್ಕೆ ಮತ್ತು ಆದಿ ಗುರು ಶಂಕರಾಚಾರ್ಯ, ಶ್ರೀ ರಾಮನುಜಾಚಾರ್ಯ ನಡೆದಾ ಡಿದ್ದ ಪುಣ್ಯ ಭೂಮಿಯ ಪೂಜ್ಯ ಸ್ಥಳ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ದಕ್ಷಿಣ ಭಾರತದ ಬ್ರಾಹ್ಮಣ ಸಮುದಾಯ ಮಠಾಧೀಶರಲ್ಲಿ ವಿನಂತಿಸುತ್ತದೆ.
