ಮಂಜುಳ ವಾಣಿ ಯುವತಿ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ
ನಗರದ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಧಿಕ ಮಾಸದ ಪ್ರಯುಕ್ತ ಜರುಗುತ್ತಿರುವ ಹರಿಭಜನೆ ಕಾರ್ಯಕ್ರಮದಲ್ಲಿ ಜುಲೈ 29, ಶನಿವಾರ ಸಂಜೆ ಶ್ರೀನಗರದ ಮಂಜುಳ ವಾಣಿ ಯುವತಿ ಭಜನಾ ಮಂಡಳಿಯ ಸದಸ್ಯರು ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ಹಲವಾರು ಅಪರೂಪದ ಕೃತಿಗಳನ್ನು ಪ್ರಸ್ತುತ ಪಡಿಸಿದರು.
