ಅಭಿಮಾನಿಗಳಿಂದ ಬೆಂಗಳೂರು ದಕ್ಷಿಣ ಡಿಸಿಪಿ ಡಾ. ಎಸ್. ಸಿದ್ದರಾಜುರವರಿಗೆ ಅಭಿನಂದನೆಗಳು

ಬೆಂಗಳೂರು : ನಗರದ ಕೆಇಬಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಕಲ್ಯಾಣ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ, ಇತ್ತೀಚೆಗೆ ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ಆಗಿ ಬೆಂಗಳೂರು ದಕ್ಷಿಣ ವಿಭಾಗದ ಅಧಿಕಾರ ಸ್ವೀಕರಿಸಿರುವ ಡಿಸಿಪಿ ಡಾ. ಎಸ್. ಸಿದ್ದರಾಜು ಅವರನ್ನು ಸಂಸ್ಥೆಯ ವತಿಯಿಂದ ಹಿರಿಯ ಉಪಾಧ್ಯಕ್ಷರಾದ ಮೋಹನ್ ಕುಮಾರ್ ಹಾಗೂ ಖಜಾಂಚಿಗಳಾದ ಆರ್. ಕುಮಾರ್, ಎಇಇ, ಕೆಪಿಟಿಸಿಎಲ್ ರವರುಗಳು ಹೂಗುಚ್ಛವನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಲೂರು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಮುನಿರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಆರ್. ಅಶ್ವಥನಾರಾಯಣ ಅಂತ್ಯಜ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಂ. ಟಿ. ಸುರೇಶ್ ಕಂಠಿ, ಬೀದರ್ ನ ಶಿಕ್ಷಣಾಧಿಕಾರಿ ಡಿಡಿಪಿಐ ಡಾ. ಟಿ. ಆರ್. ದೊಡ್ಡೆ, ಕಾರ್ತಿಕ್, ಮಲ್ಲೇಶ್ ಮುಂತಾದವರು ಶುಭ ಹಾರೈಸಿದರು.