“ಅಧಿಕಮಾಸ : 108 ದಂಪತಿಗಳಿಂದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಪೂಜೆ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಅಧಿಕ ಮಾಸದ ಪ್ರಯುಕ್ತ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ,ಕಡಪ ವಸುಧೆಂದ್ರ ಆಚಾರ್ಯರ ಪೌರೋಹಿತ್ಯದಲ್ಲಿ “ಶ್ರೀ ಶ್ರೀನಿವಾಸ ಕಲ್ಯಾಣ” ಮಹೋತ್ಸವದ ಕಾರ್ಯಕ್ರಮ ಪೂಜೆಯು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು,ಈ ಪೂಜಾ ಕಾರ್ಯ ಕ್ರಮದಲ್ಲಿ 108 ದಂಪತಿಗಳು ಸಂಕಲ್ಪವನ್ನು ಮಾಡಿ ಪೂಜೆ ಯಲ್ಲಿ ಪಾಲ್ಗೊಂಡು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,ಈಸಂದರ್ಭದಲ್ಲಿ ಸೇವಾಕರ್ತೃಗಳಿಗೆ ವಿಶೇಷವಾಗಿ ಶ್ರೀಮಠದಿಂದ ಶೇಷ ವಸ್ತ್ರ, ಶ್ರೀ ಪದ್ಮಾವತಿ ಶ್ರೀನಿವಾಸದೇವರ ಭಾವಚಿತ್ರ ಹಾಗೂ ಕಂಕಣದಾರ ಫಲಮಂತ್ರಾಕ್ಷತೆಯನ್ನು ಪ್ರಸಾದ ರೂಪವಾಗಿ ವಿತರಿಸಲಾಯಿತು, ನಂತರ ಅಧಿಕ ಮಾಸದ ಪ್ರಯುಕ್ತ 33 ದಂಪತಿಗಳಿಗೆ ಮಠದಿಂದ ಅಪೂಪ ದಾನವು ನೆರವೇರಿತು, ಈ ವಿಶೇಷವಾದ ಪೂಜಾ ಕಾರ್ಯಕ್ರಮದಲ್ಲಿ ಶ್ರೀಮಠದ ಸಿಬ್ಬಂದಿಗಳು ಹಾಗೂ ಭಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ತದ ನಂತರ ಭಕ್ತ ಜನರಿಗೆ”ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಿತು, ಇದೇ ಸಂದರ್ಭದಲ್ಲಿ ಈ ದಿನ. ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಮತ್ತು ಅಪ್ಪಣೆಯ ಮೇರೆಗೆ, ಕಾಮಧೇನುಗಳಾದ ಭಾಷ್ಯದ ಅಂತರಂಗಕ್ಕೆ ದಾರಿ ತೋರಿದ- ಶ್ರೀಮನ್ಯಾಯಸುಧಾಕಾರರಾದ, ಟೀಕಾಕಾರರಾದ, ಶ್ರೀಮಜ್ಜಯತೀರ್ಥ ಗುರುವರ್ಯರ ಸ್ತೋತ್ರದ ಅಷ್ಟೋತ್ತರ ಶತ ಪಾರಾಯಣವನ್ನು , ಜಯನಗರದ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಉಪಸ್ಥಿತಿಯಲ್ಲಿ ಶ್ರೀ ಜಯತೀರ್ಥ ಸ್ತೋತ್ರ ಪಾರಾಯಣ ಸಂಘದಿಂದ ಪಾರಾಯಣವನ್ನು ನೆರವೇರಿಸಿ ಜಯಮುನಿಗಳ ಅನುಗ್ರಹಕ್ಕೆ ಪಾತ್ರರಾದರು, ಸಂಜೆ 6:00 ರಿಂದ ಶ್ರೀ ಹರಿ ಭಜನೆ ಶ್ರೀ ಅಲಕನಂದ ಭಜನಾ ಮಂಡಳಿಯಿಂದ ನೆರವೇರಲಿದೆ,

Leave a Reply

Your email address will not be published. Required fields are marked *