“ಶ್ರೀ ಪ್ರಸನ್ನ ವೆಂಕಟದಾಸರು ಐದನೇ ವಾರ ದೊಂದಿಗೆ ಮುನ್ನುಗ್ಗುತ್ತಿರುವ ಕನ್ನಡ ಧಾರ್ಮಿಕ ಚಲನಚಿತ್ರ”

ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರ ಡಾಕ್ಟರ್ ಮಧುಸೂಧನ್ ಹವಾಲ್ದಾರ್ ಅವರ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟಿಸಿರುವ ದೇವರಾತ್ ಜೋಶಿ, ಪ್ರಭಂಜನ್ ದೇಶಪಾಂಡೆ, ವಿಷ್ಣುತೀರ್ಥ ಜೋಶಿ, ಹಾಗೂ ಲಕ್ಷ್ಮೀ ಶ್ರೇಯಾಂಸಿ, ಬಾಬಿಅಣ್ಣ, ವಿಜಯಾನಂದ ನಾಯಕ್, ಹಾಗೂ ಎಸ್ ಸಾವಂತ್. ಕಥೆ- ಚಿತ್ರಕಥೆ ರೇಖಾ ಕಾಖಂಡಕಿ. ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ ಈ ಚಲನಚಿತ್ರ, ಚಿತ್ರವನ್ನು ವೀಕ್ಷಿಸಿ ಚಿತ್ರಮಂದಿರದಿಂದ ಹೊರಗಡೆ ಬರುವಾಗ ಪ್ರತಿಯೊಬ್ಬರ ಕಣ್ಣಲ್ಲೂ ಆನಂದದ ಭಾಷ್ಪ ಸುರಿಯುತ್ತದೆ. ಪ್ರತಿಯೊಬ್ಬ ಕಲಾವಿದರೂ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಈ ಚಲನಚಿತ್ರಕ್ಕೆ ಸಂಗೀತವನ್ನು ಶ್ರೀ ವಿಜಯ ಕೃಷ್ಣ ಅವರು ನೀಡಿದ್ದಾರೆ. ಈ ಚಲನಚಿತ್ರವನ್ನು ವೀಕ್ಷಿಸಿದ ಶ್ರೀಮತಿ ಸುಧಾ ನಾರಾಯಣ ಮೂರ್ತಿಯವರು ಸಂತೋಷವನ್ನು ವ್ಯಕ್ತಪಡಿಸಿದರು. ಈ ಚಲನಚಿತ್ರಕ್ಕೆ ತಾವುಗಳು ಕುಟುಂಬ ಸಮೇತ ಆಗಮಿಸಿ, ನಮ್ಮ ತಂಡವನ್ನು ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಿರ್ದೇಶಕರಾದ ಡಾ. ಮಧುಸೂದನ್ ಹವಾಲ್ದಾರ್ ರವರು ಹಾಗೂ ನಟರಾದ ಪ್ರಭಂಜನ್ ದೇಶಪಾಂಡೆ, ಹಾಗೂ ಯುವ ನಟ ದೇವರಾತ್ ಜೋಶಿ ಅವರು ವಿನಂತಿಸಿದ್ದಾರೆ.