ಯಕ್ಷಗಾನ ಉತ್ಸವ ಬೆಳ್ಳಿ ಹಬ್ಬದ ಲೋಗೋ & ಬ್ಯಾನರ್ ಬಿಡುಗಡೆ

ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಈ ಸಂಸ್ಥೆ ಏರ್ಪಡಿಸುವ “ಯಕ್ಷಗಾನ ಉತ್ಸವ” ಕಾರ್ಯಕ್ರಮ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಮೊದಲಿಗೆ ಯಕ್ಷಗಾನ ಪೂರ್ವರಂಗ ನಡೆಯಿತು ಈ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸರು & ಖ್ಯಾತ ಮೃದಂಗ ವಾದಕರು ಆಗಿರುವ ಎ.ಪಿ ಪಾಠಕ್ & ಮಟ್ಟಿ ರಾಮಚಂದ್ರ ರಾವ್ ದೀಪ ಬೆಳಗುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ “ವೀರ ಅಭಿಮನ್ಯು” & ಭಕ್ತ ಚಂದ್ರಹಾಸ” ಎನ್ನುವ ಕಥಾ ಪ್ರಸಂಗ ನಡೆಯಿತು. ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ವಾರ್ತಾಧಿಕಾರಿಗಳಾದ ಸಹನಾ ಎಮ್, ಲಕ್ಷ್ಮೀ ನರಸಿಂಹ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪಿ.ಸಿ ಮುಕುಂದ ರಾವ್, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಎನ್ ಚಲವಾದಿ ಸಂಸ್ಥೆಯ ಗುರುಗಳಾದ ಗೌರಿ ಕೆ ಮುಂತಾದವರು ಉಪಸ್ಥಿತರಿದ್ದರು….ಈ ಸಂದರ್ಭದಲ್ಲಿ ಸಪ್ಟೆಂಬರ್ 10 ರಂದು ನಡೆಯುವ ಬೆಳ್ಳಿ ಹಬ್ಬದ ಲೋಗೋ & ಬ್ಯಾನರ್ ನ್ನು ಬಿಡುಗಡೆಗೊಳಿಸಲಾಯಿತು…..

Leave a Reply

Your email address will not be published. Required fields are marked *