ಅಧಿಕ ಮಾಸದ ಪ್ರಯುಕ್ತ ಅಖಂಡ ಭಾಗವತ ಪ್ರವಚನ.

ಬೆಂಗಳೂರು : ಮುಳಬಾಗಿಲು ಶ್ರೀಪಾದರಾಜ ಮಠಾಧೀಶರಾದ ಶ್ರೀ 1008ಶ್ರೀ ಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸದ ಅಂಗವಾಗಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಅಖಂಡ ಭಾಗವತ ಪ್ರವಚನ. ವನ್ನು ಇದೇ 12-8-23ರ ಶನಿವಾರದಂದು ಆಯೋಜಿಸಲಾಗಿದೆ,


ಅಂದು ಬೆಳಿಗ್ಗೆ 8-00ರಿಂದ ರಾತ್ರಿ 8-00ರವರೆಗೆ ಹನ್ನೆರಡು ಜನ ಪಂಡಿತರು ಶ್ರೀಮದ್ ಭಾಗವತದ ದ್ವಾದಶ ಸ್ಕಂದಗಳ ಪ್ರವಚನ ವನ್ನು ಪಂ, ಶ್ರೀ ಜಯಸಿಂಹಾಚಾರ್ಯ. ಪಂ, ಶ್ರೀಮೋಹನಾಚಾರ್ಯ.ಪಂ, ಶ್ರೀಪ್ರಣವಾಚಾರ್ಯ.ಪಂ,ವಿಜಯಿಂದ್ರಾಚಾರ್ಯ. ಪಂ, ಶ್ರೀವೆಂಕಟೇಶಚಾರ್ಯ.ಪಂ, ಧನಂಜಯಾಚಾರ್ಯ. ಪಂ,ಚತುರ್ವೇದಿ ವೇದವ್ಯಾಸಾಚಾರ್ಯ. ಪಂ,ಜಗನ್ನಾಥಾಚಾರ್ಯ,.ಪಂ, ಶ್ರೀರಾಮವಿಟ್ಟಲಾಚಾರ್ಯ,.ಪಂ, ನಾಗರಾಜಾಚಾರ್ಯ. ಪಂ,ಶ್ರೀ ವೇಣುಗೋಪಾಲಾಚಾರ್ಯ.ಪಂ,ಶ್ರೀ ವೆಂಕಟನರಸಿಂಹಚಾರ್ಯ ರವರುಗಳು ನೀಡಲಿದ್ದಾರೆ ಈ ಪುಣ್ಯ ಕಾರ್ಯದಲ್ಲಿ ಹೆಚ್ಚು ಭಗವದ್ ಭಕ್ತರು ಪಾಲ್ಗೊಂಡು ಭಾಗವತ ಶ್ರಾವಣ ಮಾಡಿ ಪುನೀತರಾಗಬೇಕೆಂದು ಶ್ರೀ ಸುಜಯನಿಧಿ ತೀರ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳ :- ಶ್ರೀಪಾದರಾಜ ಮಠ, ರಾಘವೇಂದ್ರ ಕಾಲೋನಿ, ಚಾಮರಾಜಪೇಟೆ, ಬೆಂಗಳೂರು -18.
ಸಮಯ:- ಬೆಳಿಗ್ಗೆ 8-00 ರಿಂದ ರಾತ್ರಿ 8-00 ರವರೆಗೆ.

Leave a Reply

Your email address will not be published. Required fields are marked *