ರಾಯರ ಪ್ರಾಕಾರಕ್ಕೆ ನೂತನವಾಗಿ ಮರದಲ್ಲಿ ಕೆತ್ತನೆ ಮಾಡಿರುವ “ನವರಂಗದ ಅಲಂಕಾರ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಹಾಗೂ ಅವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ವಿಶೇಷವಾಗಿ ಶ್ರೀ ಗುರು ರಾಯರ ಪ್ರಾಕಾರದ ಮೇಲ್ಚಾವಣಿಗೆ ಮರದಲ್ಲಿ ಕೆತ್ತಿದ “ನವರಂಗದ ಕಲಾಕೃತಿ”ಯ ಕೆತ್ತನೆಯ ಕೆಲಸಗಳು ಪ್ರಾರಂಭವಾಗಿದೆ. ಅಂದಾಜು ಅರವತ್ತು ಲಕ್ಷದವರೆಗೂ ವೆಚ್ಚವು ತಗುಲಲಿದೆ. ಆದ್ದರಿಂದ ಭಕ್ತರು ರಾಯರ ಸೇವೆಯಲ್ಲಿ ಭಾಗವಹಿಸುವಂತಹ ಅಪೇಕ್ಷೆ ಉಳ್ಳವರು ಶ್ರೀಮಠದ ಮೊಬೈಲ್ ಈ ನಂಬರ್ ನ 9449133929 ಆನ್ಲೈನ್ ಮುಖಾಂತರ ಅಥವಾ ಶ್ರೀಮಠದ ಕಚೇರಿಯಲ್ಲಿ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರನ್ನು ವಿಚಾರಿಸಿ, ಈ ಸೇವೆಯಲ್ಲಿ ತಾವುಗಳು ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಕಿಶೋರಾಚಾರ್ಯರು ಕೋರಿದರು. ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರು ಮಾತನಾಡುತ್ತಾ ಭಕ್ತಾದಿಗಳ ಸಹಕಾರದೊಂದಿಗೆ ಪ್ರತಿ ವರ್ಷವೂ ಶ್ರೀಮಠದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನೆರವೇರುತ್ತಿವೆ. ಸ್ವರ್ಣ ಲೇಪಿತ ಗಜವಾಹನ, ಸ್ವರ್ಣ ಲೇಪಿತ ತೊಟ್ಟಿಲು, ಸ್ವರ್ಣ ಲೇಪಿತ ಪಲ್ಲಕ್ಕಿ, ಸ್ವರ್ಣಸಿಂಹಾಸನ, ಮುಖ್ಯಪ್ರಾಣ ದೇವರಿಗೆ ರತ್ನ ಕವಚ, ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ರತ್ನ ಕವಚ, ಇನ್ನು ಮುಂತಾದ ಕೆಲಸ ಕಾರ್ಯಗಳು ಶ್ರೀ ಗುರು ರಾಯರಿಗೆ ಭಕ್ತರ, ದಾನಿಗಳ ಸಹಕಾರದೊಂದಿಗೆ ಸಮರ್ಪಿತವಾಗಿವೆ, ಮತ್ತು ಪ್ರತಿ ಗುರುವಾರ ಪ್ರತಿಯೊಬ್ಬ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯುವ 2 ನೇ ಮಹಡಿಯ ಮೇಲ್ಚಾವಣಿಯು ನವೀಕರಣಗೊಳ್ಳುತ್ತಿದೆ ಎಂದು ತಿಳಿಸುತ್ತಾ ಹಾಗೂ ಈ ಒಂದು ಬೃಹತ್ತರ ವಿಶೇಷವಾದ ರಾಯರ ಪ್ರಕಾರ “ನವರಂಗದ-ಕಲಾಕೃತಿ” ಕೆಲಸಗಳು ಎರಡು ಮೂರು ವರ್ಷದಿಂದ ಪ್ರಾರಂಭವಾಗಿದೆ. ಸುಮಾರು ಅಂದಾಜು 60 ಲಕ್ಷದ ವರೆಗೂ ಖರ್ಚು ಆಗಲಿದೆ ಆದ್ದರಿಂದ ಈ ಅಪೂರ್ವವಾದ ಸೇವೆಯಲ್ಲಿ ಭಕ್ತರು ತಮ್ಮ ತನು ಮನ ಧನದಿಂದ ಭಾಗವಹಿಸಿ ಸೇವೆ ಸಲ್ಲಿಸಿ, ಶ್ರೀ ಗುರು ರಾಯರ ಶೇಷ ವಸ್ತ್ರ- ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರಾರಾಗಬೇಕೆಂದು ಕೋರಿದರು. ಈ ಸುಂದರವಾದ ಈ ನವರಂಗದ ಮರದ ಕಲಾಕೃತಿಯ ಚಿತ್ರದ ನಿರ್ಮಾಣದ ಕೆಲಸವನ್ನು ಧಾರವಾಡದ ಕೃಷ್ಣಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ (ಮಹಾಲಸಾ ಹ್ಯಾಂಡಿ ಕ್ರಾಪ್ಟ್ಸ್) ತಂಡದವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು ಹೆಚ್ಚಿನ ಮಾಹಿತಿಗಾಗಿ -9945429129, – 9449133929- 08022443962