ಹರಿದಾಸ ಮಂಜರಿ ಗಾಯನ ಕಾರ್ಯಕ್ರಮ

ಗುರುರಾಯರ ಸನ್ನಿಧಿಯಲ್ಲಿ

ಅನನ್ಯ ಗಾಯನ

ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಪವಮಾನಪುರದ ಒಂದನೇ ಮುಖ್ಯರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10, ಗುರುವಾರ ಸಂಜೆ ಏರ್ಪಡಿಸಿದ್ದ “ಹರಿದಾಸ ಮಂಜರಿ” ಗಾಯನ ಕಾರ್ಯಕ್ರಮದಲ್ಲಿ ಕು|| ಅನನ್ಯ ಬೆಳವಾಡಿ ಅವರು “ವಂದಿಪೆ ನಿನಗೆ ಗಣನಾಥ” ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ, “ರಥವನೇರಿದ ರಾಘವೇಂದ್ರ”, “ರೋಗಹರನೆ ಕೃಪಾಸಾಗರ”, “ತುಂಗಾ ತೀರದಿ ನಿಂತ”, “ಯಾಕೆ ಮೂಕನಾದ್ಯೋ”, “ಮಾರುತಿಯೇ ಏಳೆಂದು”, “ಎದ್ದುನಿಂತ ಹನುಮಂತ”, “ಬಂದಾಳ್ ನೋಡೇ ಬಂದಾಳ್ ನೋಡೇ ಭಾಗ್ಯದ ದೇವಿ “, “ನಾನೇನ ಮಾಡಿದೆನೋ”, “ಕೈಯ್ಯ ತೋರೋ ಕರುಣಿಗಳರಸನೆ”, “ನಂದತನಯ ಗೋವಿಂದ”, “ದೃಷ್ಟಿ ನಿನ್ನ ಪಾದದಲ್ಲಿ”, “ತಾರಕ್ಕ ಬಿಂದಿಗೆ”, ” ರಾಮ ಎಂಬ ಎರಡಕ್ಷರ”, “ದಾಸನಾಗು ವಿಶೇಷನಾಗು” ಹಾಡುಗಳನ್ನು ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ವಾದ್ಯ ಸಹಕಾರದಲ್ಲಿ ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ಹಾಗೂ ಶ್ರೀ ಸರ್ವೋತ್ತಮ ತಬಲಾ ವಾದನಗಳಲ್ಲಿ ಸಾಥ್ ನೀಡಿದರು. ಕೊನೆಯಲ್ಲಿ ಶ್ರೀ ಮಠದ ವ್ಯವಸ್ಥಾಪಕರು ಎಲ್ಲಾ ಕಲಾವಿದರಿಗೂ ಗುರುಗಳ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು.

Leave a Reply

Your email address will not be published. Required fields are marked *