ಬಹೃತ್ ಆಭರಣ ಮೇಳ “ಏಷ್ಯಾ ಜುವೆಲ್ಸ್‌ ಶೋ 2023” ಆರಂಭ:‌ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ

ಬೆಂಗಳೂರು, ಆ, 11; ವರ ಮಹಾಲಕ್ಷ್ಮಿ ಹಾಗೂ ಹಬ್ಬದ ಋತುವಿಗೆ ಮಹಿಳೆಯರನ್ನು ಸೆಳೆಯಲು ಬೆಂಗಳೂರಿನ ರಿಟ್ಜ್‌ ಕಾರ್ಲಟನ್‌ ನಲ್ಲಿ ಮೂರು ದಿನಗಳ “ಏಷ್ಯಾ ಜುವೆಲ್ಸ್‌ ಶೋ 2023” ಆರಂಭವಾಗಿದೆ. ದೇಶದ ಎಲ್ಲಾ ಭಾಗಗಳಿಂದ ಆಭರಣ ಮಾರಾಟಗಾರರು ತನ್ನ ಮಳಿಗೆಗಳನ್ನು ತೆರೆದಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ ನೀಡಲಾಗಿದೆ. ಕೆಲವು ಆಭರಣ ಮಾರಾಟಗಾರರು ಮೇಕಿಂಗ್ ದರ ರದ್ದುಮಾಡಿದ್ದರೆ, ಇನ್ನೂ ಕೆಲ ಮಳಿಗೆಗಳು ಆಭರಣ ಮಾರಾಟದರದಲ್ಲಿ ರಿಯಾಯಿತಿ ನೀಡಿವೆ. ಒಂದೊಂದು ಮಳಿಗೆಯಲ್ಲಿ ಒಂದೊಂದು ಬಗೆಯ ವಿನ್ಯಾಸ, ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

ದಕ್ಷಿಣ ಭಾರತದ 48 ನೇ ಆಭರಣ ಮೇಳ – ಏಷ್ಯಾ ಜುವೆಲ್ಸ್ ಶೋಗೆ ಚಿತ್ರನಟಿ ಸ್ವಾತಿ ಪ್ರಭು ಚಾಲನೆ ನೀಡಿದರು. ಮೇದಿನಿ ಉದಯ್ ಗರುಡಾಚಾರ್, ಡಾ. ಸಚಿನ ಮೋಹನ್, ಪ್ರತಿಭಾ ಶರತ್ ಗೌಡ ಹಾಗೂ ಪಲ್ಲವಿ ರವಿ ಉಪಸ್ಥಿತರಿದ್ದರು.

ಪ್ರತಿದಿನ ಬೆಳಿಗ್ಗೆ 10:30 ರಿಂದ ರಾತ್ರಿ 8 ಗಂಟೆವರೆಗೆ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಹಿಂದೆಂದೂ ಇಲ್ಲದ ಆಭರಣಗಳ ಸಂಗ್ರಹವನ್ನು ಮೇಳ ಪ್ರದರ್ಶಿಸುತ್ತಿದ್ದು, ದೇಶದ ಎಲ್ಲಾ ಆಭರಣ ಕಂಪೆನಿಗಳನ್ನು ಒಂದೇ ಸೂರಿನಡಿ ತರಲಾಗಿದೆ.

ಮೇಳದ ಆಯೋಜಕ ಹರೀಶ್ ಸಚ್ ದೇವ್ ಮಾತನಾಡಿ, ಈ ಬಾರಿಯ ಪ್ರದರ್ಶನ ಅತ್ಯಂತ ವಿಶೇಷವಾಗಿದ್ದು, ವಿಶೇಷವಾಗಿ ಬೆಂಗಳೂರು ಗ್ರಾಹಕರ ಅಭಿರುಚಿ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಭರಣಗಳು ದೊರೆಯುತ್ತಿವೆ. ವಜ್ರ, ಪ್ಲಾಟಿನಂ, ಸಾಂಪ್ರದಾಯಿಕ ವಡವೆಗಳು, ಮದುವೆ, ಪ್ರಾಚೀನ, ವಿಶೇಷ ಸಂಗ್ರಹ, ಕುಂದನ್‌, ಜಡುವಾ, ಪೊಲ್ಕಿ ವಡವೆಗಳಲ್ಲದೇ ಬೆಳ್ಳಿ ಆಭರಣ ಕೂಡ ಪ್ರದರ್ಶನದ ವಿಶೇಷವಾಗಿದೆ.

ಅಪರೂಪದ ಹರಳುಗಳು ಸಹ ಇಲ್ಲಿ ಲಭ್ಯವಿದೆ. ಬೆಂಗಳೂರು, ಮುಂಬೈ, ದೆಹಲಿ, ಜೈಪುರ, ಹೈದ್ರಾಬಾದ್‌ ಮತ್ತಿತರ ನಗರಗಳಿಂದಲೂ ಖ್ಯಾತ ಆಭರಣ ತಯಾರಕರು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಗಿರಿಜಾ ಜುವೆಲರ್ಸ್‌, ನಿಖಾರ್‌ ಜುವೆಲ್ಸ್‌, ಖೀಯಾ ಜುವೆಲರ್ಸ್‌, ಸಿಂಹ, ಪಿಎಂಜೆ, ಮುಂಬೈನ ನೆಹಾ ಜುವೆಲ್ಸ್‌, ರೇಣುಕಾ ಫೈನ್‌ ಜುವೆಲರ್ಸ್‌, ಝಿವಾ, ಸೋಹಮ್‌ ಕ್ರಿಯೇಷನ್‌, ದೆಹಲಿಯ ಸೆಹಗಲ್‌, ಅರುಣಾ ಮತ್ತಿತರೆ ಕಂಪೆನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.

Leave a Reply

Your email address will not be published. Required fields are marked *