ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಾರ್ವಜನಿಕರ ಸೇವೆ ಅವಿಸ್ಮರಣಿಯ -ಎ.ಅಮೃತ್ ರಾಜ್

ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಅದಿಶಕ್ತಿ ದೇವಸ್ಥಾನದಲ್ಲಿ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್,ರುದ್ರೇಶ್ ಸಂತೋಷ್ ಕುಮಾರ್ ನಾಯಕ್, ಮಂಜು ಬಾಬಣ್ಣ,ಸೂರ್ಯಕುಮಾರಿ
ಕರ್ನಾಟಕ ರಾಜ್ಯ ಮಹಾಪಾಲಿಕೆ ಸಂಘದ ನಿರ್ದೇಶಕರಾದ ನರಸಿಂಹರವರು ಭಾಗವಹಿಸಿದ್ದರು

ಎ.ಅಮೃತ್ ರಾಜ್ ರವರು ಮಾತನಾಡಿ ಬೆಂಗಳೂರಿನಲ್ಲಿ 1ಕೋಟಿ 30ಲಕ್ಷ ಜನಸಂಖ್ಯೆ ಇದೆ ಜನಸಂಖ್ಯೆ ಅನುಗುಣವಾಗಿ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳ ಕೊರತೆ ಇದೆ.

ಸಿಬ್ಬಂದಿಗಳ ಕೊರತೆ ಇದ್ದರು ನಗರದ ಜನತೆಗೆ ಕಂದಾಯ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಅಧಿಕಾರಿ, ನೌಕರರು ಕುಟುಂಬದ ಗಮನ ಕಡೆ ಕೊಡದೇ ಹಗಲಿರುಳು ಶ್ರಮವಹಿಸುತ್ತಾರೆ.

ಇಷ್ಟೆಲ್ಲ ಶ್ರಮವಹಿಸುವ ಅಧಿಕಾರಿ,ನೌಕರರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಸೌವಲತ್ತು ಸಿಗಬೇಕು.

ಈ ನಿಟ್ಚಿನಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ರಮಿಸುತ್ತಿದೆ.

ಬಡ್ತಿ, ವೇತನ ಹೆಚ್ಚಳ ಮತ್ತು ಆರೋಗ್ಯ ಭಾಗ್ಯ ಮತ್ತು ಹಲವಾರು ಸಮಸ್ಯೆಗಳ ಕುರಿತು ಸತತ ಹೋರಾಟ ಮಾಡಲಾಗುತ್ತಿದೆ.

ಮಾನ್ಯಮುಖ್ಯಮಂತ್ರಿಗಳಿಗೆ , ಉಪಮುಖ್ಯಮಂತ್ರಿಗಳಿಗೆ ಮತ್ತು ಆಡಳಿತಾಧಿಕಾರಿ, ಮುಖ್ಯಆಯುಕ್ತರಿಗೆ ಅಧಿಕಾರಿ, ನೌಕರರು ಬಡ್ತಿ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಯಿತು ನಮ್ಮ ಮನವಿಗೆ ಪುರಸ್ಕಾರಿಸಿ ಸಹಾಯಕ ಕಂದಾಯಧಿಕಾರಿಯಿಂದ ವಲಯ ಸಹಾಯಕ ಆಯಕ್ತರಿಗೆ ಬಡ್ತಿ
ಮಾಡಲಾಗಿದೆ ಹಾಗೂ 23ಕಂದಾಯ ಇಲಾಖೆಯ ಮ್ಯಾನೇಜರ್ ಗಳಿಗೆ ಕಂದಾಯಧಿಕಾರಿಯಾಗಿ ಬಡ್ತಿ ನೀಡಲಾಗಿದೆ ಮತ್ತು ಕಳೆದ ಮೂರು ವರ್ಷಗಳಿಂದ ಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 300ನೌಕರರಿಗೆ ಸೂಪರ್ ವೈಸರ್ ಹುದ್ದೆ ಮುಂಬಡ್ತಿ ನೀಡಲಾಗಿದೆ.

ಬೆಂಗಳೂರುನಗರ ಸ್ವಚ್ಚತೆ, ಸೌಂದರ್ಯ ವೃದ್ದಿಗೆ ಶ್ರಮಿಸುವ ಅಧಿಕಾರ, ನೌಕರರ ಸೂಕ್ತ ಸೌಲಭ್ಯ ನೀಡುವಲ್ಲಿ ಸಂಘವು ಸತತ ಶ್ರಮಿಸುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *