ಬಿಬಿಎಂಪಿ ಬೆಂಕಿ ಆನಾಹುತ: ಗಾಯಾಳುಗಳಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿ -ಅಮರೇಶ್
ಬಿಬಿಎಂಪಿ ಬೆಂಕಿ ಆನಾಹುತದಿಂದ ಸುಟ್ಟಗಾಯಾಳುಗಳಿಗೆ ಪ್ಲಾಸ್ಟಿಕ್ ಸರ್ಜರಿ ಮತ್ತು ಕ್ಮಾಸೆಟಿಕ್ ಸರ್ಜರಿ ವೈದ್ಯಕೀಯ ಸರ್ಕಾರಿ ಭರಿಸಲಿ-ಅಮರೇಶ್(ಅಂಬರೀಶ್)

ಬಿಬಿಎಂಪಿ ಕೇಂದ್ರ ಕಛೇರಿಯ ಗುಣನಿಯಂತ್ರಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಆನಾಹುತದಿಂದ 9ಜನ ಸುಟ್ಟಗಾಯಾಳುಗಳು ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಇವರಿಗೆ ಪ್ಲಾಸ್ಟಿಕ್ ಸರ್ಜರಿ ಮತ್ತು ಕ್ಮಾಸೆಟಿಕ್ ಸರ್ಜರಿ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್ (ಅಂಬರೀಶ್)ರವರು ಉಪಮುಖ್ಯಮಂತ್ರಿಗಳು, ಬೆಂಗಳೂರುನಗರ ಉಸ್ತುವಾರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಅಮರೇಶ್(ಅಂಬರೀಶ್) ರವರು ಬಿಬಿಎಂಪಿ ಗುಣ ನಿಯಂತ್ರಕ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಜನಿಯರ್ ಗಳು ಮತ್ತು ಸಿಬ್ಬಂದಿಗಳಾದ ಒಟ್ಟಾರೆ 7ಪುರುಷರು ಮತ್ತು ಇಬ್ಬರು ಮಹಿಳೆಯರಿಗೆ ಶೇಕಡ 10ರಿಂದ 28ರವರೆಗೆ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಯೆ ಪಡೆಯುತ್ತಿದ್ದಾರೆ.
ಯಾವುದೇ ಪ್ರಾಣಪಾಯವಿಲ್ಲದೆ ಚಿಕಿತ್ಯೆ ಪಡೆಯುತ್ತಿದ್ದಾರೆ, ಸುಟ್ಟಗಾಯ ಮುಖ ಮತ್ತು ಕೈಗಳಿಗೆ ಹೆಚ್ಚು ಹಾನಿಯಾಗಿದೆ.
ಗಾಯಾಗಳು ವಾಸಿಯಾದ ನಂತರ ಕಪ್ಪು ಸುಟ್ಟಕಲೆಗಳು ಹಾಗೇ ಉಳಿಯುತ್ತದೆ ಮತ್ತು ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಪ್ಲಾಸ್ಟಿಕ್ ಮತ್ತು ಕ್ಮಾಸೆಟಿಕ್ ಸರ್ಜರಿ ಮೊದಲಿನಂತೆ ರೂಪ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.
ಉಪಮುಖ್ಯಮಂತ್ರಿಗಳು, ಬೆಂಗಳೂರುನಗರ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ರವರು ಸರ್ಜರಿ ಅವಶ್ಯಕತೆ ಇರುವವರಿಗೆ ಸರ್ಕಾರವೆ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿದರು.