ಸ್ವಾತಂತ್ರ್ಯೋತ್ಸವದ ಪ್ರಯುಕ್ತಆಜಾದಿ ಕಾ ಜಶ್ನ್

77 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅನುಬಂಧ ಫೌಂಡೇಶನ್, ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಿದ್ದ ಆಜಾದಿ ಕಾ ಜಶ್ನ್ ಕಾರ್ಯಕ್ರಮವನ್ನು ವಿಶ್ವಕಪ್ ವಿಜೇತ ಅಂಧರ ಭಾರತೀಯ ಕ್ರಿಕೆಟ್ ತಂಡದ ನಾಯಕ ಪದ್ಮಶ್ರೀ ಪುರಸ್ಕೃತ ಶೇಖರ್ ನಾಯಕ್ ಉದ್ಘಾಟಿಸಿದರು.

ಮಾಜಿ ಎಸ್ ಪಿ‌ ಜಿ ಕಮಾಂಡೋ ಶ್ರೀ ಸಂಜಯ್, ಬ್ರಿಗೇಡಿಯರ್ ಶ್ರೀ ರವಿ ಮುನಿಸ್ವಾಮಿ, ರಾಕೆಟ್ ವಿಜ್ಞಾನಿ ಡಾ. ಮಂಜುನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್, ಅನುಬಂಧ ಫೌಂಡೇಶನ್ ಅಧ್ಯಕ್ಷ ಡಾ. ದೇವರಾಜ್ ಆಂಜಿನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ಧ ಶ್ರೀ ಈರಣ್ಣ ಉದೋಶಿ, ಕಾಶ್ಮೀರದ ಗಡಿಯಲ್ಲಿ ಕಾರ್ಯ ನಿರ್ವಹಿಸಿದ್ದ ಶ್ರೀ ಜಯರಾಮ್ ಸೇರಿದಂತೆ ಆಪರೇಶನ್ ಪರಾಕ್ರಮ್ ಲ್ಲಿ‌ ಭಾಗವಹಿಸಿದ್ದ‌ ಶ್ರೀ ಗೋವಿಂದ ರಾಜು ಸೇರಿದಂತೆ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಯೋಧರನ್ನು, ಗಡಿ ಭದ್ರತಾ ಪಡೆಯ ಸೈನಿಕರನ್ನು ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೋರಾಡುವ ನಾಗರಿಕ ರಕ್ಷಣಾ ಪಡೆಯ ಯೋಧರನ್ನು ಈ ಯೋಧ ನಮನ‌ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಯುಕೆ ನವೀನ್ ಡ್ಯಾನ್ಸ್ ಸ್ಟುಡಿಯೋ ದ ಮಕ್ಕಳ ನೃತ್ಯ ದೇಶ ಭಕ್ತಿ ಪುಟಿದೇಳುವಂತೆ ಮಾಡಿತು.

Leave a Reply

Your email address will not be published. Required fields are marked *