ಭಾರತ್ ಎಲೆಕ್ಟ್ರಾನಿಕ್ಸ್ ನ ಶೈಕ್ಷಣಿಕ ಸಂಸ್ಥೆಗಳಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

ಬೆಂಗಳೂರು : 76 ನೇ ಸ್ವಾತಂತ್ಯ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ನ ಸಪ್ತ ಶೈಕ್ಷಣಿಕ ಸಂಸ್ಥೆಗಳ ವತಿಯಿಂದ ಬಿಇಎಲ್ ನ ಡಾ|| ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 8:30 ಕ್ಕೆ ಆಚರಿಸಲಾಯಿತು.
ಈ ಅದ್ದೂರಿ ರಾಷ್ಟ್ರಹಬ್ಬದ ಕಾರ್ಯಕ್ರಮದಲ್ಲಿ ದ್ವಜಾರೋಹಣವನ್ನು ಬಿ ಇ ಇ ಐ ನ ಅಧ್ಯಕ್ಷರಾದ ಪಹುಜ ಬಿ. ಪಿ ನೆರವೇರಿಸಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮನೋಜ್ ಜೈನ್ ನಿರ್ದೇಶಕರು (ಆರ್ ಮತ್ತು ಡಿ )ಹೆಚ್ಚುವರಿ ನಿರ್ದೇಶಕರು (ಬೆಂಗಳೂರು ಕಂಪ್ಲೇಕ್ಸ್ )ಬಿ ಇ ಎಲ್ ಬೆಂಗಳೂರು ಅವರು ಆಗಮಿಸಿದರು. ಬಿ ಇ ಎಲ್ ನ ಗಣ್ಯರು ಉಪಸ್ಥಿತರಿದ್ದರು.
ಈ ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ಬಿ ಇ ಇ ಐ,ನ ಎಂ. ಸಿ, ಸಪ್ತ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು.
ಕಾರ್ಯಕ್ರಮದ ಅಧ್ಯಕ್ಷರಾದ ಪಹುಜ ಬಿ. ಪಿ ರವರು ಎನ್. ಸಿ.ಸಿ, ಪ್ಯಾರಡೇಯ ಕೆಡಿಟ್ಸ್ ಗಳೊಂದಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡು ಭಾರತಾಂಬೆಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯುತರು ನಮ್ಮ ದೇಶದ ಸ್ವಾತಂತ್ಯ ಹೋರಾಟ ಮತ್ತು ಸ್ವಾತಂತ್ಯ ದ ಮಹತ್ವವನ್ನು ಮುದ್ದು ಮಕ್ಕಳಿಗೆ ಹಾಗೂ ನೆಲೆಸಿದ್ದ ಸಭಿಕರಿಗೂ ಎಳೆ -ಎಳೆ ಯಾಗಿ ತಿಳಿಸಿದರು.ನಂತರ ಎಲ್ಲರ ಗಮನ ಸೆಳೆಯುವ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ದೇಶ ಭಕ್ತಿ ಎತ್ತಿಹಿಡಿಯುವ ಅದ್ಭುತ ನೃತ್ಯಗಳ ಮೂಲಕ ಅಮೋಘವಾದ ಪ್ರದರ್ಶನ ನೀಡುವುದರೊಂದಿಗೆ ಕಾರ್ಯಕ್ರಮವನ್ನು ವಿಸ್ಮಯಗೊಳಿಸಿದರು.






