ಸರ್ಕಾರಿ ಶಾಲಾ ಮಕ್ಕಳಿಗೆ ಡಾ. ಅಂಬರೀಶ್ ಜಿ. ರವರಿಂದ ಪುಸ್ತಕಗಳ ವಿತರಣೆ
ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪ ಸಂತೆ ಬೀದಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಸ್5ಆಕ ಪರಿಕರಗಳನ್ನು ವಿತರಿಸಲಾಯಿತು.
76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಾಜ ಸೇವಕರು, ಬಿಜೆಪಿ ಮುಖಂಡರು ಆಗಿರುವ ಡಾ. ಅಂಬರೀಶ್ ಜಿ. ರವರು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರುಗಳಾದ ಮಹಾಲಕ್ಷ್ಮೀ, ಪ್ರಭಾ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.
