`ನಂದಿನಿ’ ಉತ್ಪನ್ನಗಳಿಗೆ 30 ದಿನ 20% ರಿಯಾಯತಿ!
ಸ್ವಾತಂತ್ರ÷್ಯ ದಿನದಿಂದ ಗಣೇಶ ಹಬ್ಬದವರೆಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ರಿಯಾಯತಿ ಘೋಷಿಸಿದೆ.

ಗ್ರಾಹಕರಿಗೆ ಎಲ್ಲಾ ಶ್ರೇಣಿಯ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. ೨೦ರಷ್ಟು ನೇರ ರಿಯಾಯಿತಿ ಘೋಷಿಸಿದೆ. ಒಂದು ತಿಂಗಳುಗಳ ಕಾಲು ಈ ರಿಯಾಯತಿ ಇರಲಿದೆ.
ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಗ್ರಾಹಕರು ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ.
ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕೀಸ್, ಕಡಲೆ ಬೀಜ, ಬೆಲ್ಲದ ವಿಶೇಷ ನಂದಿನಿ ಕೋವಾ ,ಕೋವಾ ಕಡಲೆ ಮಿಠಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ಹಾಲಿನ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಡ್ರೆöÊ ಫ್ರೂಟ್ಸ್, ಮೈಸೂರು ಪಾಕ್, ಚಾಕೊಲೇಟ್ ಬರ್ಫಿಗಳು, ಕುಂದಾ, ಜಾಮೂನು, ರಸಗುಲ್ಲ, ಸಿರಿಧಾನ್ಯ ಹಾಲಿನ ಪುಡಿ ಮೊದಲಾದವು ಶೇಕಡ ೨೦ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ.
ಈ ತಿಂಗಳು ಹಾಲಿನ ರೇಟ್ ಹೆಚ್ಚಾಗಿದ್ದು, ಗ್ರಾಹಕರು ಬೇಸರ ಮಾಡಿಕೊಂಡಿದ್ದಾರೆ. ಅದರ ಮಧ್ಯೆ ಈ ವಿಷಯ ಸ್ವಲ್ಪ ಖುಷಿ ಕೊಟ್ಟಿದೆ.
ನೀವು ನಂದಿನಿ ಸಿಹಿ ತಿಂಡಿ ತಿನಿಸುಗಳನ್ನು ತಿಂದಿದ್ದೀರಾ…? ಹಾಗಾದರೆ ನಿಮಗೆ ಕಾದಿದೆ ದೊಡ್ಡ ರಿಯಾಯಿತಿ… ಇದಿಗ ಸರಕಾರ ಘೋಷಿಸಿದಂತೆ ನಂದಿನಿ ಸಿಹಿ ಉತ್ಪನ್ನಗಳ ಮೇಳೆ ೩೦ ದಿನಗಳ ಕಾಲ ಶೇಕಡಾ ೨೦ ರಷ್ಟು ರಿಯಾಯಿತಿ ನೀಡುತ್ತಲಿದೆ. ನೀವು ಯಾವೆಲ್ಲಾ ಉತ್ಪನ್ನಗಳನ್ನು ರಿಯಾಯತಿಯಲ್ಲಿ ಕೊಂಡುಕೊಳ್ಳಬಹುದು ಇಲ್ಲಿದೆ ಮಾಹಿತಿ…..
ಹಬ್ಬಗಳನ್ನು ಸಂತೋಷದಿAದ ಆಚರಿಸಿ…. ಒಟ್ಟಾಗಿ ಮನೆ ಮಂದಿಯೆಲ್ಲಾ ಸೇರಿ ಆಚರಿಸಿ… ಹೊಸ ಹುರುಪು ಹೊಸ ರುಚಿಗಳು ನೀವು ನೋಡದ್ದು ಈಗ ನಿಮ್ಮ ನಾಲಿಗೆ ತುದಿಯಲ್ಲಿ….