ಭಾರತೀಯ ಚಿಕಿತ್ಸಕ ವೈದ್ಯರ ಸಂಘದ ನಿಯೋಜಿತ ರಾಜ್ಯಾಧ್ಯಕ್ಷರಾಗಿ ರಾಯಚೂರಿನ ಡಾ ಸುರೇಶ ಸಗರದ

ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಭಾರತೀಯ ಚಿಕಿತ್ಸಕ ವೈದ್ಯರ ಸಂಘದ ೪೦ನೇ ವಾರ್ಷಿಕ ಸಮ್ಮೇಳನವನ್ನು ದಿನಾಂಕ ೧೧, ೧೨ ಮತ್ತು ೧೩ ರಂದು ಆಯೋಜಿಸಲಾಗಿತ್ತು. ಶನಿವಾರ ಸಂಜೆ ಡಾ ಬಿ ಸಿ ರಾಯ್ ಸಭಾಂಗಣದಲ್ಲಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಜರುಗಿತು. ೨೩-೨೪ ನೇ ಸಾಲಿನ ಕಾರ್ಯಕಾರಿಣಿ ಸಮಿತಿಯನ್ನು ಸಭೆಯಲ್ಲಿ ಘೋಷಿಸಲಾಯಿತು. ಚುನಾವಣೆ ಅಧಿಕಾರಿಗಳಾದ ಡಾ ಮುರಳಿ ಮೋಹನರವರು ೨೩-೨೪ ನೇ ಸಾಲಿನ ಚುನಾವಣೆಯ ಕುರಿತು ಮಾಹಿತಿ ನೀಡಿ ಡಾ ಸುರೇಶ ಸಗರದ ಅವರು ೨೩-೨೪ ನೇ ಸಾಲಿಗೆ ನಿಯೋಜಿತ ಅಧ್ಯಕ್ಷರಾಗಿ ಮತ್ತು ಡಾ ಮಹಾಲಿಂಗಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಹಿರಿಯ ಹೃದಯ ರೋಗ ತಜ್ಞರಾದ ಡಾ ಸುರೇಶ ಸಗರದ ಅವರು ಈಗಾಗಲೇ ಎರಡು ಬಾರಿ ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಹಾಗೂ ವೈಜ್ಞಾನಿಕ ನಿಯತಕಾಲಿಕದ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಶಾಖೆಯ ವೈಜ್ಞಾನಿಕ ಸಮಿತಿಯ ಅಧ್ಯಕ್ಷರಾಗಿರುವ ಡಾ ಸಗರದ ಅವರು ೨೩-೨೪ ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ, ೨೪ ರಲ್ಲಿ ಮಂಡ್ಯದಲ್ಲಿ ಆಯೋಜಿಸಲಾಗುವ ರಾಜ್ಯ ಸಮ್ಮೇಳನದ ವೈಜ್ಞಾನಿಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸವರು ಮತ್ತು ೨೪-೨೫ ನೇ ಸಾಲಿನ ರಾಜ್ಯ ಶಾಖೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸವರು.
ಈಗಾಗಲೇ ಭಾರತೀಯ ಹೃದಯ ರೋಗ ತಜ್ಞರ ಕರ್ನಾಟಕ ರಾಜ್ಯ ಶಾಖೆಯ ೨೦೧೬-೧೭ ನೇ ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯ ಶಾಖೆಯ ನಿಯೋಜಿತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಡಾ ಸಗರದ ಅವರಿಗೆ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ ಎಸ್ ಎಸ್ ರೆಡ್ಡಿ ಮತ್ತು ಕಾರ್ಯದರ್ಶಿ ಡಾ ಅರುಣ್ ಮಸ್ಕಿ ಮತ್ತು ಸರ್ವ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ. ರಾಜ್ಯ ಶಾಖೆಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲೆಯ ಪ್ರಥಮ ವೈದ್ಯರಾಗಿದ್ದು ಡಾ ಸಗರದ ಅವರ ನೇತೃತ್ವದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು ಮೂಡಿಬರಲು ಜಿಲ್ಲಾ ಸಂಘಟನೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಡಾ ಸಗರದ ಅವರಿಗೆ ರಾಯಚೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ ಪ್ರಭುರಾಜ ಗದ್ದಿಕೇರಿ ಮತ್ತು ಕಾರ್ಯದರ್ಶಿ ಡಾ ಹರ್ಷ ಪಾಟೀಲ್ ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *