ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):
ಒಂದು ನಿಲ್ದಾಣ ಒಂದು ಉತ್ಪನ್ನ ಕಾರ್ಯಕ್ರಮವು ಕೇಂದ್ರ ರೈಲ್ವೇ ಸಚಿವಾಲಯ ಮತ್ತು ರಾಷ್ಟ್ರೀಯ ಜೀವನೋವಾಯ ಅಭಿಯಾನದ ಸಹಯೋಗದಲ್ಲಿ ಅನುμÁ್ಠನಗೊಳಿಸಲಾಗುತ್ತಿರುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಸ್ಥಳೀಯ ಕುಶಲ ಕರ್ಮಿಗಳು, ಕೈಮಗ್ಗ ನೇಕಾರರು ಮುಂತಾದವರ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿಗೆ ಸೂಕ್ತ ಅವಕಾಶವನ್ನು ಕಲ್ಪಿಸುವುದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಅವರು ತಿಳಿಸಿದರು.
ಇಂದು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನ ವತಿಯಿಂದ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಮುಖ್ಯ ಉದ್ದೇಶವು ಮಹಿಳಾ ಸ್ವ ಸಹಾಯ ಸಂಘಗಳಿಗೆ ಆರ್ಥಿಕ ನೆರವು, ಕೌಶಲ್ಯಾಭಿವೃದ್ಧಿ ತರಬೇತಿ, ಮಾರುಕಟ್ಟೆ ಸೌಲಭ್ಯ, ಇತ್ಯಾದಿಗಳನ್ನು ಒದಗಿಸಿ ನಗರ ಪ್ರದೇಶದಲ್ಲಿನ ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಾಗಿರುತ್ತದೆ ಎಂದು ಅವರು ತಿಳಿಸಿದರು.
ಸ್ಪ-ಸಹಾಯ ಸಂಘಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದರಿಂದ ಅವರ ಆರ್ಥಿಕ ಚಟುವಟಿಕೆಗಳನ್ನು ಉನ್ನತಗೊಳಿಸುವುದು ಮತ್ತು ಅವರ ಅತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕರ್ನಾಟಕದ ಸಾಂಸ್ಕøತಿಕ ಐತಿಹಾಸಿಕತೆಯನ್ನು ಪ್ರತಿನಿಧಿಸುವ ಹಸ್ತಶಿಲ್ಪಗಳು, ಕಲಾಕೃತಿಗಳು ಮತ್ತು ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳ ವಿವಿಧ ಕಲೆಗಳ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರಚಾರದ ಮೂಲಕ ಪ್ರಾದೇಶಿಕವಾಗಿ ಕುಶಲಕರ್ಮಿಗಳು ಮತ್ತು ಉದ್ದಿಮೆದಾರರ ಸುಸ್ಥಿರ ಜೀವನೋಪಾಯಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಮಹಿಳಾ ಸ್ವ-ಸಹಾಯ ಸಂಘಗಳು, ಉತ್ಪಾದಿಸುವ, ವಾಣಿಜ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜನ ಮತ್ತು ನಿರಂತರ ಕೌಶಲ್ಲಿ ಸುಧಾರಣೆ, ಉತ್ಪನ್ನ ನವೀಕರಣ ಮತ್ತು ವ್ಯವಹಾರ ಜ್ಞಾನ ಇದರಿಂದ ಬೆಳವಣಿಗೆಯಾಗಲಿದೆ. ಪ್ರಸ್ತುತ ರಾಷ್ಟ್ರೀಯ ಜೀವನೋಪಾಯ ಅಭಿಯಾನದಿಂದ ರಾಜ್ಯದ 09 ರೈಲ್ವೆ ಕೇಂದ್ರಗಳಲ್ಲಿ ಸ್ವ-ಸಹಾಯ ಸಂಘಗಳು ಉತ್ಪನ್ನಗಳೊಂದಿಗೆ ಮಳಿಗೆಗಳಿವೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಡಾ.ರಾಧಾಪ್ರಿಯ ಆರ್. ಉಪಸ್ಥಿರಿದ್ದರು.