ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):World Sustainability Congress ರವರು ನೀಡುವ ಏμÁ್ಯದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುμÁ್ಠನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ.ಇಂದು ಸಿಂಗಾಪೂರ್‍ನಲ್ಲಿWorld Sustainability Congress ರವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ನೇ ಸಾಲಿನ ಏμÁ್ಯದ ಅತ್ಯುತ್ತಮ ಉದ್ಯೋಗದಾತ ಬ್ಯಾಂಡ್ ಪ್ರಶಸ್ತಿಯನ್ನು ವಿಲ್ಟರ್ ಎನ್.ಜಿ. ಕಂಟ್ರಿ ಮ್ಯಾನೇಜರ್, ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಸರ್ಟಿಫೈಡ್ ಪೆÇ್ರಫೆಶನಲ್ ಅಕೌಂಟೆಂಟ್ಸ್ ಹಾಗೂ ಅಟಾರ್ನಿ ಕರೀನ ಲೆನೋರ್, ಎಸ್.ಬಯೋನ್, ಚೀಫ್ ಎನ್ವೈರ್‍ಮೆಂಟ್, ಸೋಷಿಯಲ್ ಮತ್ತು ಗೌರ್ನನ್ಸ್ ಅಫೀಸರ್, ಕಂಪ್ಲಯನ್ಸ್ ಮತ್ತು ಡಾಟಾ ಪ್ರೈವೇಸಿ ಅಧಿಕಾರಿ, ಅವರು ನೀಡಿದ ಪ್ರಶಸ್ತಿಯನ್ನು ನಿಗಮದ ಪರವಾಗಿ ಶ್ರೀಮತಿ ಮಂಜುಳ ನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಹಾಗೂ ಡಾ. ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಸ್ವೀಕರಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.