ದಾವಣಗೆರೆಯಲ್ಲಿ ಡಿ. ಎಸ್ .ಎಸ್ ಸಮಿತಿಯ ರಾಜ್ಯ ಮಟ್ಟದ ಅಧ್ಯಯನ ಶಿಬಿರ

ನ್ಯಾಯಾಲಯ, ಕಾನೂನು ಮತ್ತು ಹೋರಾಟಗಳ ನಡುವೆಯೂ ಇಂದಿಗೂ ಜಾತಿಯ ಮೇಲಿನ ದೌರ್ಜನ್ಯಗಳು ಹೆಚ್ಚಳ

ದೇವನಹಳ್ಳಿ:ರಾಜ್ಯದಲ್ಲಿ ಶೋಷಿತ ಸಮಾಜದ ಜನರಿಗೆ ನ್ಯಾಯ ಒದಗಿಸಲು ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ,ಇಂದು ಸಮಾಜದಲ್ಲಿ ಹಲಾವಾರು ಸಮಸ್ಯೆಗಳು ರೂಪಾಂತರಗೊಂಡಿವೆ,ಇಷ್ಟೇಲ್ಲಾ ನ್ಯಾಯಾಲಯ, ಕಾನೂನು ಮತ್ತು ಹೋರಾಟಗಳ ನಡುವೆಯೂ ಇಂದಿಗೂ ಜಾತಿಯ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ ಎಂದು ಡಿ.ಎಸ್.ಎಸ್.ನ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅವರು ಹೇಳಿದರು.

ದೇವನಹಳ್ಳಿ ಟೌನ್ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ ) ವತಿಯಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೈತ್ರಿ ವನದ ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ಆಗಸ್ಟ್ 24 ,25 ,26 27 ರಂದು “ದಲಿತ ಚಳುವಳಿ ಅಂದು, ಇಂದು… ಮುಂದು .. ಅವಲೋಕನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಆಯೋಜಿಸಿರುವ ಕುರಿತು” ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ದಲಿತ ಚಳುವಳಿಯ ಗೋಷ್ಠಿಯಲ್ಲಿ ಶಿಬಿರದ ಉದ್ಘಾಟನೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್, ಮುಖ್ಯ ಅತಿಥಿಗಳಾಗಿ ಇಂದಿರಾ ಕೃಷ್ಣಪ್ಪ ,ರಾಜಶೇಖರ್ ಮೂರ್ತಿ ,ಎ.ಬಿ.ರಾಮಚಂದ್ರಪ್ಪ ಮಾವಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತಿ ವಿನಾಶದ ಪರಿಕಲ್ಪನೆ, ಸಮಕಾಲಿನ ಸಮಾಜದ ಅವಲೋಕನ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು, ಅಂಬೇಡ್ಕರ್ ಕುರಿತು ಸಿನಿಮಾ ಪ್ರದರ್ಶನ ಮತ್ತು ಸಂವಾದ, ಅಂಬೇಡ್ಕರ್ ಅವರ ಪರಿಕಲ್ಪನೆಯಲ್ಲಿ ಪ್ರಜಾಪ್ರಭುತ್ವ ಸಮಕಾಲಿನತೆ ಮತ್ತು ರಾಷ್ಟ್ರೀಯತೆ ,ಅಂಬೇಡ್ಕರ್ ಮತ್ತು ಮಹಿಳೆಯರ ಪ್ರಶ್ನೆ ಶಿಕ್ಷಣ ವ್ಯವಸ್ಥೆ ಮತ್ತು ದಲಿತರ ಪ್ರತಿನಿಧಿಕರಣ, ಮೀಸಲಾತಿಯ ಚಾರಿತ್ರಿಕ ಬೆಳವಣಿಗೆ ಮತ್ತು ನ್ಯಾಯಾಂಗದ ತೀರ್ಪುಗಳು ,ಮಾಧ್ಯಮಗಳು ಮತ್ತು ದಲಿತರ ಪ್ರಶ್ನೆಗಳು, ಜನಪ್ರಿಯ ಸಂಸ್ಕೃತಿಯಲ್ಲಿ ಅಂಬೇಡ್ಕರ್ ದಲಿತ ಚಳುವಳಿಯ ಅವಲೋಕ ನಾಯಕತ್ವ, ಹೊಸ ತಲೆಮಾರಿನ ಕಣ್ಣಲ್ಲಿ ದಲಿತ ಚಳುವಳಿ,ದಲಿತ ಸಾಂಸ್ಕೃತಿಕ ಅಸ್ಮಿತೆಯ ಹಾಡು ನಾಟಕ ಸಂವಾದ ಕಾರ್ಯಕ್ರಮ‌ಗಳು ನಡೆಯಲಿದ್ದು ಡಿ ಎಸ್ ಎಸ್ ಸಮಿತಿಯ ಜಿಲ್ಲಾವಾರು ಆಯ್ದಾ ಪದಾಧಿಕಾರಿಗಳು ಭಾಗವಿಹಿಸಲಿದ್ದಾರೆ ಎಂದು ತಿಳಿಸಿದರು.
ಡಿ.ಎಸ್.ಎಸ್.ನ ಜಿಲ್ಲಾ ಸಂಚಾಲಕರು ಶ್ರೀನಿವಾಸ್ ಮಾತನಾಡಿ ರಾಜ್ಯಮಟ್ಟದಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಯ್ದಾ ಪದಾಧಿಕಾರಿಗಳು ಹೆಚ್ಚಾಗಿ ಭಾಗವಹಿಸಿ ಸಂಘಟನಾ ಚತುರತೆ ಮತ್ತು ಶೋಷಿತ ವರ್ಗಗಳ ಧ್ವನಿಯಾಗಿ ಹಲವಾರು ವಿಷಯಗಳನ್ನು ಮನದಟ್ಟು ಮಾಡಿಕೊಂಡು ನಮ್ಮ ಸಮುದಾಯದ ಜನರನ್ನು ಸಂಘಟಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಡಿ.ಎಸ್.ಎಸ್. ನ ಸಂಚಾಲಕರು ಶ್ರೀನಿವಾಸ್ ಈಗಿನ ಪ್ರಸ್ತುತ ಸಮಾಜದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲೆ ಗೊತ್ತಿದ್ದು ಗೊತ್ತಿಲ್ಲದೆ ಸೆಲೆಬ್ರಿಟಿ ಉಪೇಂದ್ರ ರವರು ಒಂದು ಸಮುದಾಯವನ್ನು ನಿರ್ದಿಷ್ಟವಾಗಿ ಗುರಿ ಮಾಡಿ ಅವಮಾನಿಸುವಂತಹ ಗಾದೆಯಾಗಲಿ ಹೇಳಿಕೆಯಾಗಲಿ ನೀಡುವುದು ಸಮಂಜಸವಲ್ಲ ಎಂದರು.

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ವಿಭಾಗಿಯ ಸಂಘಟನಾ ಸಂಚಾಲಕ ಕೆ.ಆರ್ ಮುನಿಯಪ್ಪ,ಮಾಜಿ ಸಂಚಾಲಕರು ಮೂರ್ತಿ, ಜಿಲ್ಲೆಯ ಸಂಚಾಲಕರುಗಳಾದ ಆವತಿ ತಿಮ್ಮರಾಯಪ್ಪ, ಜೋಗಳ್ಳಿ ನಾರಾಯಣಸ್ವಾಮಿ,, ರಮೇಶ್ ತಾಲೂಕು ಸಂಚಾಲಕ ನರಸಪ್ಪ ,ಆಲಗೊಂಡನಹಳ್ಳಿ ಮುನಿಸ್ವಾಮಿ, ಎಚ್. ಕೆ ವೆಂಕಟೇಶಪ್ಪ ,ನಾರಾಯಣಸ್ವಾಮಿ ಹಾಗೂ ದೇವನಹಳ್ಳಿ, ಹೊಸಕೋಟೆ ತಾಲೂಕಿನ ಸಂಚಾಲಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *