ಬಹುಮುಖ ವ್ಯಕ್ತಿತ್ವದ ಶ್ರೀರಕ್ಷಾ ಹೆಗಡೆ ರಂಗಪ್ರವೇಶ
ಶ್ರೀರಕ್ಷಾ ರವಿ ಹೆಗಡೆ ವಿಶೇಷ ಪ್ರತಿಭೆಯ ನೃತ್ಯಕಲಾವಿದೆ. ತಾಯಿ ಮತ್ತು ಗುರು ಪ್ರಸಿದ್ಧ ನೃತ್ಯಜ್ಞೆ ಡಾ. ಜಯಶ್ರೀ ರವಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನ ಸ್ಥಾಪಕಿ. ಶ್ರೀರಕ್ಷಾ ಶಾಸ್ತ್ರೀಯ ಸಂಗೀತ, ಯೋಗ, ನೃತ್ಯ ಸಂಯೋಜನೆ, ಪ್ರದರ್ಶನ, ಯಕ್ಷಗಾನ, ಕ್ರೀಡೆಗಳಲ್ಲೂ ಮುಂದಿರುವ ಬಹುಮುಖ ಪ್ರತಿಭೆ ಶ್ರೀರಕ್ಷಾ ನೃತ್ಯದ ಎಲ್ಲ ಆಯಾಮಗಳನ್ನು ಅಭ್ಯಾಸ ಮಾಡಿದ್ದಾಳೆ. ಇದೀಗ ಇವಳು ಇದೇ ತಿಂಗಳ 20 ಭಾನುವಾರದಂದು ಜೆ.ಎಸ್.ಎಸ್. ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ.
