ವಾರ್ತಾಜಾಲ ಪತ್ರಿಕೆ ಕಚೇರಿ ಸಭಾಂಗಣದಲ್ಲಿ “ಮರಳಿ ಬಂದ ಮಹಾತ್ಮಾ ಗಾಂಧಿ”

ಆಗಸ್ಟ್ 15 ರಂದು 76ನೇ ಸ್ವಾತಂತ್ರೊö್ಯತ್ಸವವನ್ನು ಇಡೀ ಭಾರತ ದೇಶ ಸಂಭ್ರಮ ಸಡಗರದಿಂದ ಆಚರಣೆ ಮಾಡಿತು. ಜೊತೆಗೆ ಪ್ರತಿ ಭಾರತೀಯನ ಮನದಲ್ಲೂ ಸ್ವಾತಂತ್ರö್ಯ ಸಿಕ್ಕಿದ ಆಗಸ್ಟ್ 15 ಭಾವನಾತ್ಮಕ ರೂಪ ಪಡೆದು ಪ್ರತಿಯೊಬ್ಬರೂ ಸಂಭ್ರಮಿಸಿದರು. ಅದೇ ದಿನ ವಾರ್ತಾಜಾಲ ದಿನಪತ್ರಿಕೆಯ ಕಚೇರಿಯಲ್ಲಿ ಭಾರತಮಾತೆಯ ಫೋಟೋವನ್ನಿಟ್ಟು ಪೂಜಿಸಿ ಭಾರತದ ಹೆಮ್ಮೆಯ ಧ್ವಜವನ್ನು ಕಚೇರಿಯಲ್ಲಿ ಹಾರಾಡುವಂತೆ ಮಾಡಿ ಹಿರಿಯ ಹಾಸ್ಯನಟ ಮೈಸೂರು ರಮಾನಂದ್‌ರ ರಚನೆ, ನಿರೂಪಣೆಯ “ಮಲ್ಲೇಶ್ವರಕ್ಕೆ ಬಂದ ಮಹಾತ್ಮಾ ಗಾಂಧಿ” ಎಂಬ ವಿಸ್ಕೃತ ಸಂದೇಶವಿರುವ ಹಾಸ್ಯದ ಜತೆ ಮನರಂಜನೆಯುಳ್ಳ ಪುಟ್ಟ ನಾಟಕವನ್ನು ಸಾದರಪಡಿಸಿದರು.
ವಾರ್ತಾಜಾಲ ದಿನಪತ್ರಿಕೆಯಲ್ಲಿನ ಶ್ರೀಮತಿ ಪ್ರಸನ್ನಲಕ್ಷಿö್ಮ ಟಿ.ಆರ್ ರವರು ಕುವೆಂಪುರವರ ರಚನೆಯ ದೇಶಭಕ್ತಿಗೀತೆಯಾದ “ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಎಂಬ ಸ್ವಾಗತ ಗೀತೆ ಹಾಡಿದರು.

ನಾಟಕದಲ್ಲಿ ಗಾಂಧೀಜಿಯ ವೇಷಧಾರಿಯಾಗಿ ದಿನೇಶ್ ಅವರು ಗಾಂಧಿಗೆ ಭೂಲೋಕದಲ್ಲಿ ಸಿಗುವ ಕುಡುಕ ವ್ಯಕ್ತಿಯಾಗಿ ಮೈಸೂರು ರಮಾನಂದ್ ಅವರು ಹಾಗೂ ಅವರ ಸ್ನೇಹಿತನ ಪಾತ್ರಧಾರಿಯಾಗಿ ನಾಗರಾಜ್ ಅವರು ಮನೋಜ್ಞ ಅಭಿನಯ ನೀಡಿದರು.
ಈ ಕಾರ್ಯಕ್ರಮಕ್ಕೆ ಸೂತ್ರಧಾರಿಯಾಗಿ ವಾರ್ತಾಜಾಲ ದಿನಪತ್ರಿಕೆಯ ಬಿ.ಕೆ.ಪ್ರಸನ್ನ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೂಡಿಬರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಬಿ.ಆರ್. ನರಸಿಂಹಮೂರ್ತಿ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದರು.

Leave a Reply

Your email address will not be published. Required fields are marked *