ಮೊಬೈಲ್/ ಇಂಟರ್ನೆಟ್ ನ ಅತಿ ಬಳಕೆಯಿಂದ ಮಕ್ಕಳು ಬಳಲುತಿದ್ದಿರಾ? ಇದರಿಂದ ಪಾರಾಗುವುದು ಹೇಗೆ…?
ಮೊಬೈಲ್/ ಇಂಟರ್ನೆಟ್ ನ ಅತಿಯಾದ ಬಳಕೆಯಿಂದ ನೀವು & ನಿಮ್ಮ ಮಕ್ಕಳು ಬಳಲುತಿದ್ದಿರಾ?

ಇದರಿಂದ ಹೇಗೆ ಪಾರಾಗುವುದು ಎಂಬ ಚಿಂತೆಯೇ? ಚಿಂತಿಸಬೇಡಿ.. ನಿಮಗಾಗಿಯೇ ಒಂದು ಕಾರ್ಯಾಗಾರ ವನ್ನು ನಾಳೆ, ಪ್ರಸನ್ನ ಕೌನ್ಸೆಲಿಂಗ್ ಸೆಂಟರ್ ಏರ್ಪಡಿಸಿದೆ. ಇಂದೇ ನೊಂದಾಯಿಸಿ. ಇದರಲ್ಲಿ ಭಾಗವಹಿಸಿ.. (ಕೆಳಗೆ ನೀಡಲಾದ ಪೋಸ್ಟರ್ ನಲ್ಲಿ ವಿವರ ಮತ್ತು ಫೋನ್ ನಂಬರ್ ನೀಡಲಾಗಿದೆ.) ನಿಗದಿತ ಸೀಟ್ ಇರೋದ್ರಿಂದ ಕೂಡಲೇ ನೊಂದಾಯಿಸಿ.. ಮೊಬೈಲ್ ನ ಅತಿಯಾದ ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಮಗ್ನರಾಗುವುದು ಒಂದು ” ಚಟ” ವಾಗಿ ಪರಿಣಮಿದೆ. ಅದರಲ್ಲೂ ಪುಟ್ಟ ಮಕ್ಕಳು ಗಲಾಟೆ ಮಾಡಬಾರದೆಂದು ಅಮ್ಮಂದಿರೆ ಅವರಿಗೆ ಮೊಬೈಲ್ ಕೊಟ್ಟು, ಸದ್ಯ ಗಲಾಟೆ ತಪ್ಪಿತಲ್ಲ ಎಂದು ಕುಶಿ ಪಡುತ್ತಾರೆ.
ಇನ್ನು ಕಾಲೇಜು ಯುವಕ/ಯುವತಿಯರ ಕತೆಯಂತೂ ಹೇಳೋದೇ ಬೇಡ. ಹಾಗಂತ ಹಿರಿಯರೇನು ಕಡಿಮೆ ಇಲ್ಲ.. ಈ ಒಂದು “ಮಾಯಾಜಾಲದಲ್ಲಿ” ಎಲ್ಲರೂ ಸಿಲುಕಿ ಕೊಂಡಿದ್ದಾರೆ..! “ಅತಿಯಾದರೆ ಅಮೃತವೂ ವಿಷ” ಎಂಬ ಮಾತಿನಂತೆ , ಹಿತ ಮಿತವಾಗಿ ಮೊಬೈಲ್,ಇಂಟರ್ನೆಟ್ ಬಳಕೆ ಮಾಡಿದರೆ ಮನಸ್ಸು – ದೇಹ ಎರಡಕ್ಕೂ ತುಂಬಾ ಒಳ್ಳೆಯದು.. ಈ ವ್ಯಸನ/ ಚಟದಿಂದ ಮಾನಸಿಕ ಮತ್ತು ದೈಹಿಕ ತೊಂದರೆಗಳು ಅಪಾರ.ಇವುಗಳ ಕೆಟ್ಟ ಪರಿಣಾಮಗಳಿಂದ ಹೊರಬರಲಾಗದೆ ಲಕ್ಷಾಂತರ ಮಂದಿ ಒದ್ದಾಡುತ್ತಿದ್ದಾರೆ.
ಅನೇಕ ತಂದೆ ತಾಯಂದಿರು ಮಕ್ಕಳನ್ನು ಆಪ್ತ ಸಮಾಲೋಚನಾ ಕೇಂದ್ರ (ಕೌನ್ಸೆಲಿಂಗ್ ಸೆಂಟರ್) ಗಳಿಗೆ ಕರೆದು ಕೊಂಡು ಹೋಗುತ್ತಿದ್ದಾರೆ..! ಮೊಬೈಲ್,ಇಂಟರ್ನೆಟ್ ನ ಅತಿಯಾದ ಬಳಕೆಯಿಂದ ಮಕ್ಕಳ ಓದಿನಲ್ಲಿ ಹಿನ್ನಡೆ ಆಗುತ್ತಿದೆ, ನೋಡ ಬಾರದ್ದನ್ನು ನೋಡುವ, ಕಲಿಯುವ ಆಸಕ್ತಿ ಹೆಚ್ಚುತ್ತಿದೆ. ಅಪ್ಪ ಅಮ್ಮ ಉದ್ಯೋಗದಲ್ಲಿರುವುದು, ಮನೆಯಲ್ಲಿ ಅಜ್ಜ ಅಜ್ಜಿ ಇಲ್ಲದಿರುವುದು, ಇದರಿಂದ ಮಕ್ಕಳು ಹೆಚ್ಚು ಸಮಯ ಒಂಟಿಯಾಗಿ ಕಳೆಯುವುದರಿಂದ, ಇಂತಹ ಚಟಗಳಿಗೆ ಅನಿವಾರ್ಯವಾಗಿ ಬೀಳುವಂತಾಗಿದೆ..! ಇದಕ್ಕೆಲ್ಲ ಪರಿಹಾರವಿದೆಯಾ? ಎಂಬ ಪ್ರಶ್ನೆಗೆ ಖಂಡಿತಾ ಇದೆ. “ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ” ಎಂಬಂತೆ ಮಾಡಿಕೊಳ್ಳದೆ, ಆಪ್ತ ಸಮಾಲೋಚಕರು , ಮನಶಾಸ್ತ್ರಜ್ಞರು, ಮನೋವೈದ್ಯರ ಬಳಿ ಹೋಗಿ ಈ ಸಮಸ್ಯೆಯಿಂದ/ಚಟದಿಂದ ಹೊರಗೆ ಬರುವುದು ಒಂದು ಉತ್ತಮ ನಿರ್ಧಾರ..!
ಮಾನಸಿಕ ಆರೋಗ್ಯ, ಆಪ್ತ ಸಮಾಲೋಚನೆ ಬಗ್ಗೆ ,ಕಳೆದ 40 ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಪ್ರಸನ್ನ ಕೌನ್ಸೆಲಿಂಗ್ ಸೆಂಟರ್ ನಾಳೆ 20.8.2023 ರ ಭಾನುವಾರ ಬುಲ್ ಟೆಂಪಲ್ ರಸ್ತೆಯಲ್ಲಿ ಇರುವ ಕೇಂದ್ರದಲ್ಲಿ ಒಂದು ಅತ್ಯಮೂಲ್ಯವಾದ ಕಾರ್ಯಗಾರ (workshop) ವನ್ನು ಆಯೋಜಿಸಿದೆ. ಮೊಬೈಲ್ ಮತ್ತು ಇಂಟರ್ನೆಟ್ ನ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು, ಅದರಿಂದ ಹೊರಬರುವುದು ಹೇಗೆ, ಆ ಮೂಲಕ ಆರೋಗ್ಯ ಪೂರ್ಣ, ಉಲ್ಲಾಸಮಯ, ಆನಂದಮಯ ಜೀವನ ನಡೆಸುವುದು ಹೇಗೆ ಎಂಬ ಕುರಿತು ನಿಮ್ಹಾನ್ಸ್ ನಲ್ಲಿ ಕ್ಲಿನಿಕಲ್ ಸೈಕಾಲಜಿ ಪ್ರೊಫೆಸರ್ ಆಗಿರುವ ಡಾ. ಮನೋಜ್ ಕುಮಾರ್ ಶರ್ಮಾ ಎಂ.ಫಿಲ್.ಪಿ.ಹೆಚ್.ಡಿ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಅಶ್ವಿನಿ ತಡ ಪತ್ರಿಕರ್ ಅವರು ತಿಳಿಸಿ ಕೊಡಲಿದ್ದಾರೆ. ಇದೊಂದು ಅತ್ಯುತ್ತಮ ಕಾರ್ಯಗಾರವಾಗಿದ್ದು, ಇದರಲ್ಲಿ ಪಾಲ್ಗೊಂಡು ಈ ಒಂದು ವ್ಯಸನದಿಂದ ಆಗುವ ದುಷ್ಪರಿಣಾಮಗಳು ಮತ್ತು ಇದರಿoದ ಪಾರಾಗುವುದರ ಬಗ್ಗೆ ತಜ್ಞರಿಂದ ತಿಳಿದು ಕೊಳ್ಳಿ. ನೆಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಳ್ಳಿ.. –
ಬೋಪಯ್ಯ ಚೋವಂಡ. (ಆಪ್ತ ಸಮಾಲೋಚಕರು)