ವಿದ್ಯಾರ್ಥಿಗಳ ಜೀವನದಲ್ಲಿ ಗುರಿ,ಛಲ ಇರಬೇಕು : ಆಂಜಿನಪ್ಪ ಪುಟ್ಟು



ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ, ಶಿಡ್ಲಘಟ್ಟ
ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಛಲ, ಆಸಕ್ತಿಯೊಂದಿಗೆ ನಿಖರ ಗುರಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡ ಪರಿಶ್ರಮ ಹಾಕಬೇಕು.
ವಿದ್ಯಾರ್ಥಿಗಳಿಗೆ ಗುರುಗಳ ಆಶೀರ್ವಾದವಿದ್ದರೆ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾದ್ಯ ಎಂದು ಎಸ್ ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ನಗರದ ಹೊರವಲಯದ ಹಂಡಿಗನಾಳ ಗ್ರಾಮದ ಶ್ರೀ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಎಸ್ಎನ್ ಕ್ರಿಯಾ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಸಾಧಕರನ್ನು ಗುರಿಯಾಗಿಸಿಕೊಂಡು ತಮ್ಮ ಮುಂದಿನ ಭವಿಷ್ಯದ ಗುರಿಯನ್ನು ತಲುಪಿದಾಗ ಮಾತ್ರ ನಿಮ್ಮ ಬೆಳವಣಿಗೆಯಲ್ಲಿ ಪೋಷಕರು, ಗುರುಗಳು,ಸ್ನೇಹಿತರು ಹಾಗೂ ನಿನ್ನ ಸುತ್ತಮುತ್ತಲಿನ ಜನಕ್ಕೆ ನೀನು ಕೊಟ್ಟ ದೊಡ್ಡ ಕೊಡುಗೆಯಾಗುತ್ತದೆ. ಹಾಗೇಯೆ ಮುಂದಿನ ದಿನಗಳಲ್ಲಿ ನೀವು ಮತ್ತಿತರರಿಗೆ ಮಾರ್ಗದರ್ಶಕರಾಗಿ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಿಡ್ಲಘಟ್ಟ ತಾಲೂಕಿನ 500 ಕ್ಕೂ ವಿದ್ಯಾರ್ಥಿಗಳಿಗೆ ಎಸ್ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರು ಪ್ರಶಸ್ತಿ ಪತ್ರನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಅತ್ಯುತ್ತಮ ಅಂಕಳಿಸಿದ 55 ವಿದ್ಯಾರ್ಥಿಗಳಿಗೆ ಎಲ್ಇಡಿ ಟಿವಿ, ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಕುಕ್ಕರ್ ಮತ್ತು ಪ್ರಶಸ್ತಿ ಪತ್ರ ನೀಡಿ ಮಕ್ಕಳೊಂದಿಗೆ ಪೋಷಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಗೌಡನಹಳ್ಳಿ ಮಂಜುನಾಥ್, ತಲಕಾಯಲಬೆಟ್ಟ ಅಶ್ವತ್ಥರೆಡ್ಡಿ,ಬೆಳ್ಳೂಟಿ ಸಂತೋಷ್,ಕೊರ್ರ್ಲಪರ್ತಿ ಶೇಖರ್ ರೆಡ್ಡಿ,ಅಶ್ವತ್ಥರೆಡ್ಡಿ, ನಿರ್ದೇಶಕ ಸೋಮಶೇಖರ್, ಅಪ್ಸರ್ ಪಾಷಾ,ಆನೂರು ದೇವರಾಜ್,ಆನಂದ್,ಕೋಟಹಳ್ಳಿ ಶ್ರೀನಿವಾಸ್,ಕಾಳನಾಯಕನಹಳ್ಳಿ ರಮೇಶ್, ಶಶಿಕುಮಾರ್ ಹಾಗು ಎಸ್.ಎನ್ ಕ್ರಿಯಾ ಟ್ರಸ್ಟ್ ಸದಸ್ಯರು ಹಾಗೂ ಮುಖಂಡರು ಮತ್ತಿತರರು ಇದ್ದರು.