ಉಬುಂಟು ಉದ್ಯಮಿಗಳಿಂದ ಐದು ದಿನದ ಕಾಂಬೋಡಿಯ ಪ್ರವಾಸ

ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಉಬುಂಟು ಮಹಿಳಾ ಉದ್ಯಮ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದ್ದು, ದೇಶದ ವಿವಿಧ ಭಾಗಗಳಲ್ಲಿನ ಸುಮಾರು 53 ಮಹಿಳಾ ಉದ್ಯಮಿಗಳ ನಿಯೋಗ ಆಗಸ್ಟ್ 25 ರಿಂದ 29 ರವರೆಗೆ ಐದು ದಿನಗಳ ಕಾಂಬೋಡಿಯ ಪ್ರವಾಸ ಕೈಗೊಳ್ಳಲಿದೆ.

ಉಬುಂಟು ಮಹಿಳಾ ಉದ್ಯಮಿಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರು ಮತ್ತು ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಕೆ ರತ್ನಪ್ರಭಾ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಬುಂಟು ನಿಯೋಗದೊಂದಿಗೆ ಭೇಟಿ ಮಾಡಿ ಕಾಂಬೋಡಿಯಾದಲ್ಲಿ ಸುಮಾರು 60 ಪ್ರತಿಶತ ಮಹಿಳೆಯರು ಉದ್ಯಮಶೀಲ ಮತ್ತು ನಾಯಕತ್ವ ಸ್ಥಾನವನ್ನು ಅಲಂಕರಿಸಿದ್ದಾರೆ. ಅಲ್ಲಿನ ಉತ್ಕೃಷ್ಟ ದರ್ಜೆಯ ಈ ಗುಣಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕದ 25 ಮಹಿಳಾ ಉದ್ಯಮಿಗಳು ಸೇರಿದಂತೆ ಭಾರತದಾದ್ಯಂತ ಸುಮಾರು 53 ಉದ್ಯಮಿಗಳು ಕಾಂಬೋಡಿಯಾಗೆ ತೆರಳಲಿದ್ದಾರೆ.

ಮಹಿಳಾ ಉದ್ಯಮಿಗಳು ಕಾಂಬೋಡಿಯದಲ್ಲಿನ ಸುಮಾರು 75 ಅಧಿಕ ಸಂಸ್ಥೆಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಅವರ ಉತ್ಕೃಷ್ಟ ಅನುಭವಗಳನ್ನು ಸಹ ಪಡೆದುಕೊಳ್ಳಬಹುದು, ಎಂದು ರತ್ನಪ್ರಭಾ ತಿಳಿಸಿದರು.
ಪ್ರವಾಸದ 100 ದಿನಗಳಂದು ಚರ್ಚೆ, ಸಂವಾದಗಳ ಆಯೋಜಿಸುವ ಮುಖಾಂತರ ಬಿಟುಬಿ ಕೊಂಡಿಗಳನ್ನು ವೃದ್ಧಿಸಲು ಸಾಧ್ಯವಾಗುತ್ತದೆ ಎಂದರು. ಅಲ್ಲದೆ ಪರಸ್ಪರ ಅಭಿವೃದ್ಧಿಗಾಗಿ ಅಲ್ಲಿನ ಕೆಲ ಉದ್ಯಮಗಳ ಆಯ್ಕೆಗಳನ್ನು ಸಹ ಮಾಡಲಾಗುವುದು.
ಕಾಂಬೋಡಿಯಾದ ಸಮೃದ್ಧ ಪರಂಪರೆಯನ್ನು ಮತ್ತು ಪ್ರಪಂಚದ ಬಹುದೊಡ್ಡ ದೇವಾಲಯ ಸಂಕೀರ್ಣವಾದ ಆಂಕರ್ ವಾಟ್ ಟೆಂಪಲ್ ನ ಸೌಂದರ್ಯವನ್ನು ಸವಿಯಬಹುದು.

ಇದಕ್ಕೂ ಮುನ್ನ ರತ್ನಪ್ರಭಾ ಅವರು
ಉಬುಂಟು ಮಹಿಳಾ ಉದ್ಯಮಿಗಳ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಮತ್ತು ಮಹಿಳೆಯರು ಸ್ವಾವಲಂಬಿ ಉದ್ಯಮಿಗಳಾಗಲು ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದೆ ಎಂದು ತಸ್ಮರಿಸಿ ಅವರ ಸಹಕಾರ ಕೋರಿಕೊಂಡರು.

ಮಹಿಳಾ ಉದ್ಯಮಗಳು ತಮ್ಮ ಉದ್ಯಮದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಬಳುವಳಿಯಾಗಿ ನೀಡಿ ಸಿದ್ದರಾಮಯ್ಯನವರ ಸಹಕಾರ ಮತ್ತು ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಉಬುಂಟು ಸಂಸ್ಥೆಯ ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಹಾಗೂ ಖಜಾಂಚಿ ಲತಾ ಗಿರಿಶ್ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *