ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ವೃದ್ಧಿಯ ಸಲುವಾಗಿ ಸೈಕಲ್ ಸವಾರಿಯ ಮೂಲಕ ಜಾಗೃತಿ

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಗಳಿಗೆ ಮೋಟಾರು ವಾಹನಗಳ ಬಳಕೆಯಿಂದ ಉಂಟಾಗುತ್ತಿರುವ ವಾಯು ಪ್ರದೂಷಣೆಯು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಪರಿಸರದ ಬಗ್ಗೆ ಕಾಳಜಿ ಉಳ್ಳ ಪರಿಸರ ಪ್ರೇಮಿಗಳು, ಈ ಜಾಗತಿಕ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಧ್ಯಕ್ಕಂತೂ ಸಾಧ್ಯವಿಲ್ಲವೆಂಬುದನ್ನು ಗ್ರಹಿಸಿ, ಈ ಸಮಸ್ಯೆಯನ್ನು ಉಲ್ಭಣಿಸದಂತೆ ಹತೋಟಿಯಲ್ಲಿಡಲು ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಂಡು, ಆ ನಿಟ್ಟಿನಲ್ಲಿ ಸಾರ್ವತ್ರಿಕವಾಗಿ ಪರಿಸರ ಪ್ರಜ್ಞೆಯನ್ನು ಮೂಡಿಸಲು ಕೆಲವು ಪರಿಣಾಮಕಾರಿ ಯೋಜನೆಗಳನ್ನು ಅನುಸರಿಸುತ್ತಿದ್ದು, ಅವುಗಳಲ್ಲಿ ಪರಿಸರಕ್ಕೆ ಧಕ್ಕೆಯನ್ನುಂಟುಮಾಡದ ಜೊತೆಗೆ ಆರೋಗ್ಯಕ್ಕೂ ಹಿತಕರವಾದದ್ದು ಎಂದೆನಿಸಿರುವ ಸೈಕಲ್ ಬಳಕೆಯನ್ನು ಹೆಚ್ಚಿಸಲು, ಆ ಬಗ್ಗೆ ಇಂದಿನ ಯುವಜನರಲ್ಲಿ ಜಾಗೃತಿಯನ್ನು ಮೂಡಿಸಲು, ಉತ್ಸಾಹಿ ಯುವ ಮಿತ್ರರನ್ನು ಒಗ್ಗೂಡಿಸಿ ಕೃಷ್ಣಮೂರ್ತಿ ಸಿ.ಡಿ. ರವರು ಸಂಸ್ಥಾಪಕ ಅಧ್ಯಕ್ಷರಾಗಿ ‘ಯೂತ್ ಸೈಕಲ್ ರೈಡರ್ಸ್ ಕ್ಲಬ್’ ನ್ನು ಉಪಾಧ್ಯಕ್ಷ ಶ್ರೀಧರ್ ಪೌಲ್, ಕಾರ್ಯದರ್ಶಿಗಳಾಗಿ ಸಮಾಜ ಸೇವಕ ಡಾ. ಜಿ.ಎಸ್. ಚೌಧರಿರವರ ಸಹಯೋಗದಲ್ಲಿ 2022 ರಿಂದಲೂ, ನಗರದ ನಾನಾ ಭಾಗಗಳಲ್ಲಿ ನೆಲೆಸಿರುವ ಸುಮಾರು 50ಕ್ಕೂ ಹೆಚ್ಚು ಸದಸ್ಯರು ಪ್ರತಿ ಭಾನುವಾರದಂದು ಸೂರ್ಯೋದಯಕ್ಕೆ ನಿಗಧಿತ ಸ್ಥಳದಲ್ಲಿ ಸೇರಿ, ಪ್ರತಿವಾರವೂ ಒಂದೊಂದು ದಿಕ್ಕಿನಲ್ಲಿ ಸುಮಾರು 30 ಕಿ.ಮೀ.ಗಳ ದೂರವನ್ನು ಸೈಕಲ್ ಸವಾರಿಯ ಮೂಲಕ ಸಂಚರಿಸಿ, ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಾ, ಸೈಕಲ್ ಬಳಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಡವು ನಿರತವಾಗಿದ್ದು, ಪ್ರತೀವಾರ ತಂಡಕ್ಕೆ ನೂತನ ಸದಸ್ಯರ ಸೇರ್ಪಡೆಯಿಂದ ಗಮನಸೆಳೆಯುತ್ತಿರುವ ಈ ಕ್ಲಬ್ ನ ವತಿಯಿಂದ ಸೈಕಲ್ ಸಂಚಾರದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ಉಚಿತವಾಗಿ ಉಪಹಾರವನ್ನು ಒದಗಿಸುವ ಮೂಲಕ ಪ್ರೋತ್ಸಾಹಿಸುವುದನ್ನು ತಮ್ಮ ವಾಡಿಕೆನ್ನಾಗಿಸಿ ಕೊಂಡಿದ್ದಾರೆ.

ಇವರ ಪರಿಸರ ಹಾಗೂ ಆರೋಗ್ಯಪರ ಕಾಳಜಿಯ ಸೇವೆಯು, ಹೀಗೆ ಮುಂದುವರೆಯಲಿ ಎಂದು ನಾವು ನೀವೆಲ್ಲರೂ ಆಶಿಸೋಣವಲ್ಲವೇ.
ವರದಿ : ಕೆ. ಸುಕುಮಾರ್ ರಾಜು

Leave a Reply

Your email address will not be published. Required fields are marked *